Breaking NewsLatestಸಿನಿಮಾ

Puneeth Rajkumar: ನಾಲ್ವರು ಅಂದರ ಬಾಳಿಗೆ ಬೆಳಕಾದ ನಟ ಪುನೀತ್​ ರಾಜ್​​​ಕುಮಾರ್​ ಕಣ್ಣುಗಳು

ಬೆಂಗಳೂರು: ಸಾವಿನಲಲ್ಲೂ ಸಾರ್ಥಕತೆ ಮೆರೆದ ಸ್ಯಾಂಡಲ್​​ವುಡ್ ನಟ, ಪವರ್​ಸ್ಟಾರ್​ ಪುನೀತ್​​ ರಾಜ್​​ಕುಮಾರ್​ ಅವರ ತಂದೆ ಡಾ. ರಾಜ್​​​ಕುಮಾರ್​ ಹಾದಿಯಲ್ಲೇ ಸಾಗಿ ನೇತ್ರದಾನ ಮಾಡಿದ್ದಾರೆ. ಅವರ ಕಣ್ಣುಗಳಿಂದ ನಾಲ್ವರು ಅಂಧರ ಬಾಳು ಬೆಳಕಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್​​ವುಡ್ ನಟ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ಇಬ್ಬರಿಗಲ್ಲ, ಕಣ್ಣಿನ ತೊಂದರೆ ಎದುರಿಸುತ್ತಿರುವ ಮೂವರು ಪುರುಷರು, ಓರ್ವ ಮಹಿಳೆಗೆ ಕಣ್ಣುಗಳನ್ನ ಅಳವಡಿಸಲಾಗಿದೆ. ಈ ನಾಲ್ವರು ಕರ್ನಾಟಕ ರಾಜ್ಯದವರು ಎಂದು ತಿಳಿಸಿದರು.

ಹೊಸ ರೀತಿಯ ತಂತ್ರಜ್ಞಾನದ ಮೂಲಕ ನಾಲ್ವರಿಗೆ ಅಳವಡಿಸಲಾಗಿದೆ. ಮುಂದಿನ ಭಾಗ ಒಬ್ಬರಿಗೆ, ಅದರ ಹಿಂದಿನ ಭಾಗವನ್ನು ಮತ್ತೊಬ್ಬರಿಗೆ ಜೋಡಿಸಲಾಗಿದೆ. ಹೀಗೆ ಒಂದು ಕಣ್ಣನ್ನು ಇಬ್ಬರಿಗೆ, ಮತ್ತೊಂದು ಕಣ್ಣನ್ನು ಇಬ್ಬರಿಗೆ ಸೇರಿಸಿದಂತೆ ನಾಲ್ವರಿಗೆ ಪುನೀತ್ ರಾಜ್ ಕುಮಾರ್ ಕಣ್ಣನ್ನು ಅಳವಡಿಸಲಾಗಿದೆ ಎಂದರು.

ಇದು ರಾಜ್ಯದಲ್ಲೇ ಹೊಸ ಪ್ರಯೋಗ:

ಸಾಮಾನ್ಯವಾಗಿ, ಕಾರ್ನಿಯಾದ ಮೇಲಿನ ಮತ್ತು ಆಳವಾದ ಪದರಗಳನ್ನು ಬೇರ್ಪಡಿಸುವ ಮೂಲಕ ಪ್ರತಿ ಕಣ್ಣಿನಿಂದ ತಲಾ ಇಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ. ಆದರೆ, ಇಲ್ಲಿ ಮೇಲ್ಪದರದ ಕಾರ್ನಿಯಲ್ ಕಾಯಿಲೆ ಇರುವ ಇಬ್ಬರು ರೋಗಿಗಳಿಗೆ ಮೇಲ್ಪದರವನ್ನು ಕಸಿ ಮಾಡಲಾಗಿದೆ. ಹಾಗೇ ಆಳವಾದ ಪದರವನ್ನು ಮಾತ್ರ ಎಂಡೋಥೀಲಿಯಲ್ ಅಥವಾ ಆಳವಾದ ಕಾರ್ನಿಯಲ್ ಲೇಯರ್ ಕಾಯಿಲೆ ಇರುವ ರೋಗಿಗಳಿಗೆ ಕಸಿಮಾಡಲಾಗಿದೆ. ಆದ್ದರಿಂದ, ನಾಲ್ಕು ವಿಭಿನ್ನ ರೋಗಿಗಳಿಗೆ ದೃಷ್ಟಿ ಪುನಃಸ್ಥಾಪಿಸಲು ಸಾಧ್ಯವಾಯಿತು. ಎರಡು ಕಾರ್ನಿಯಾಗಳಿಂದ ನಾಲ್ಕು ವಿಭಿನ್ನ ಕಸಿಗಳನ್ನು ರಚಿಸಿದ್ದೇವೆ. ನಾಲ್ವರು ಕಣ್ಣಿನ ತೊಂದರೆ ಅನುಭವಿಸುತ್ತಿದ್ದಂತವರಿಗೆ ಪುನೀತ್ ರಾಜ್ ಕುಮಾರ್ ಕಣ್ಣು ಅಳವಡಿಸಿದ ನಂತರ ತುಂಬಾ ಚೆನ್ನಾಗಿದ್ದಾರೆ. ನಮಗೆ ತಿಳಿದ ಮಟ್ಟಿಗೆ ನಮ್ಮ ರಾಜ್ಯದಲ್ಲಿ ಇದನ್ನು ಯಾರೂ ಮಾಡಿಲ್ಲ ಎಂದು ತಿಳಿಸಿದರು.

ಡಾ.ರೋಹಿತ್ ಶೆಟ್ಟಿ ಅವರ ನೇತೃತ್ವದಲ್ಲಿ ಡಾ.ಯತೀಶ್ ಶಿವಣ್ಣ, ಡಾ.ಶರೋನ್ ಡಿಸೋಜಾ ಮತ್ತು ಡಾ.ಹರ್ಷ ನಾಗರಾಜ್ ಅವರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಇವರಿಗೆ ಕಾರ್ನಿಯಾ ತಂಡದ ಡಾ.ಗೈರಿಕ್ ಕುಂದು ಮತ್ತು ಶ್ರೀ ವೀರೇಶ್ ನೆರವು ನೀಡಿದರು.

Related Articles

Leave a Reply

Your email address will not be published. Required fields are marked *

Back to top button