Breaking NewsLatest

ಬಂಧನದ ಸುಳಿವು; ತನಿಖೆ ಸಿಬಿಐಗೆ ವಹಿಸುವಂತೆ ಹೈಕೋರ್ಟ್ ಮೊರೆಹೋದ ವಾಂಖೆಡೆ

ಮುಂಬೈ: ತಮ್ಮ ವಿರುದ್ಧದ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಎನ್​ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಮಹಾರಾಷ್ಟ್ರ ಹೈಕೋರ್ಟ್ ಮೊರೆಹೋಗಿದ್ದಾರೆ. ಮುಂಚಿತವಾಗಿ ನೊಟೀಸ್ ನೀಡದ ಹೊರತು ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್​ ಎದುರು ಹೇಳಿದ ಬಳಿಕ, ಬಂಧನದ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ ವಾಂಖೆಡೆ ಈ ಮನವಿ ಮಾಡಿಕೊಂಡಿದ್ದಾರೆ.

ಆರ್ಯನ್ ಖಾನ್ ಕೇಸ್​ನಲ್ಲಿ ಸುಲಿಗೆ ಮತ್ತು ಲಂಚದ ಆರೋಪ ಎದುರಿಸುತ್ತಿರುವ ಸಮೀರ್ ವಾಂಖೆಡೆ ವಿರುದ್ಧ ಗುಪ್ತಚರ ದಳದ ತನಿಖೆಗೂ ಸರ್ಕಾರ ಆದೆಶಿಸಿದೆ.

ಕೇಂದ್ರ ಸರ್ಕಾರದ ಅಧಿಕಾರಿಯಾಗಿರುವ ನನ್ನ ವಿರುದ್ಧದ ಮಹಾರಾಷ್ಟ್ರ ಸರ್ಕಾರದ ಕ್ರಮ ಅದರ ವ್ಯಾಪ್ತಿ ಮೀರಿದ್ದಾಗಿದೆ ಎಂಬು ವಾಂಖೆಡೆ ವಾದ. ಸರ್ಕಾರ ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದೆ. ಯಾವುದೇ ದಿನವೂ ಅದು ನನ್ನನ್ನು ಬಂಧಿಸಬಹುದು. ಹಾಗಾಗಿ ನನಗೆ ಮಧ್ಯಂತರ ರಕ್ಷಣೆ ಬೇಕೆಂದು ನಿನ್ನೆ ಅವರು ಕೋರ್ಟ್ ಮೊರೆಹೋಗಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸರ್ಕಾರಿ ಪರ ವಕೀಲರು, ವಾಂಖೆಡೆ ವಿರುದ್ಧ ಇನ್ನೂ ಎಫ್​ಐಆರ್ ಕೂಡ ದಾಖಲಾಗಿಲ್ಲ. ಹಾಗಾಗಿ ಅವರ ಅರ್ಜಿಯೇ ಅಕಾಲಿಕ ಎಂದು ವಾದಿಸಿದ್ದರು. ಕಿರಣ್ ಗೋಸವಿ ಸೇರಿದಂತೆ ನಾಲ್ವರ ವಿರುದ್ಧ ಅರ್ಜಿಗಳು ಬಂದಿವೆ. ಅವುಗಳಿಗೆ ಸಂಬಂಧಿಸಿ ಪ್ರಾಥಮಿಕ ತನಿಖೆಯನ್ನಷ್ಟೇ ಕೈಗೊಂಡಿದ್ದೇವೆ. ಎಫ್​ಐಆರ್​ ಕೂಡ ದಾಖಲಿಸಿಲ್ಲ ಎಂದು ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣ್ ಪೈ ಹೇಳಿದ್ದರು.

Related Articles

Leave a Reply

Your email address will not be published. Required fields are marked *

Back to top button