ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ ದಾಖಲೆ ಸಲ್ಲಿಸಿದ ಸಮೀರ್ ವಾಂಖೆಡೆ
ನವದೆಹಲಿ: ತಾವು ದಲಿತ ಸಮುದಾಯಕ್ಕೆ ಸೇರಿರುವುದನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಲು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸೋಮವಾರ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೊಗದ ಮುಂದೆ ಹಾಜರಾಗಿದ್ದಾರೆ.
ವಾಂಖೆಡೆ ವಿರುದ್ಧ ಸತತ ವಾಗ್ದಾಳಿ ನಡೆಸುತ್ತಿರುವ ಮಹಾರಾಷ್ಟ ಮಂತ್ರಿ ನವಾಬ್ ಮಲಿಕ್, ಕಳೆದ ವಾರ ಮತ್ತೊಂದು ಗಮಭೀರ ಆರೋಪ ಮಾಡಿದ್ದರು. ವಾಂಖೆಡೆ ಮುಸ್ಲಿಂ ವ್ಯಕ್ತಿಯಾಗಿದ್ದು, ಭಾರತೀಯ ರೆವೆನ್ಯೂ ಸೇವೆಗೆ ಮೀಸಲು ವರ್ಗದಿಂದ ಸೇರಲು ನಕಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಮಲಿಕ್ ಆರೋಪಿಸಿದ್ದರು. ಮಲಿಕ್ ಆರೋಪದ ಹಿನ್ನೆಲೆಯಲ್ಲಿ ವಾಂಖೆಡೆ ಇಂದು ಆಯೋಗದ ಮುಂದೆ ಹಾಜರಾಗಿದ್ದರು.
ವಾಂಖೆಡೆ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸುವುದಾಗಿ ಆಯೋಗದ ಸದಸ್ಯರಲ್ಲೊಬ್ರಾದ ಸುಭಾಷ್ ರಾಮನಾಥ್ ಪರ್ಧಿ ಹೇಳಿದ್ದಾರೆ.
ವಾರಾಂತ್ಯದಲ್ಲಿ ವಾಂಖೆಡೆ ಅವರ್ನು ಭೇಟಿಯಾಗಿದ್ದ ಆಯೋಗದ ಉಪಾಧ್ಯಕ್ಷ ಅರಣ್ ಹಲ್ದರ್, ವಾಂಖೆಡೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂದಿದ್ದರು. ಧಾರ್ಮಿಕ ಮತಾಂತರದ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದರು.
ವಾಂಖೆಡೆ ವಿಚಾರದಲ್ಲಿ ಹಲ್ದರ್ ನೀಡಿರುವ ಕ್ಲೀನ್ ಚಿಟ್ ವಿರುದ್ಧ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರನ್ನು ಭೇಟಿಯಾಗುವುದಾಗಿ ನವಾಬ್ ಮಲಿಕ್ ಹೇಳಿದ್ದರು.
ಮಲಿಕ್ ಆರೋಪದ ಹಿನ್ನೆಲೆಯಲ್ಲಿ ಆಯೋಗಕ್ಕೆ ದೂರು ದಾಖಲಿಸಿದ್ದ ವಾಂಖೆಡೆ, ಈ ವಿಚಾರದಲ್ಲಿ ತನಿಖೆ ನಡೆಸುವಂತೆ ಕೋರಿದ್ದರು. ತಮ್ಮ ತಂದೆ ಒಬ್ಬ ಹಿಂದೂ. ತಮ್ಮ ಮೃತ್ ತಅಯಿ ಮುಸ್ಲೀ ಸಮುದಾಯಕ್ಕೆ ಸೇರಿದವರಾಗಿದ್ದರು ಎಂದೂ ಅವರು ಸ್ಪಷ್ಟನೆ ಕೊಟ್ಟಿದ್ದರು.