Breaking NewsLatestಸಿನಿಮಾ

ವಿವಾಹ ವಿಚ್ಛೇದನ ಘೋಷಿಸಿದ ಸಮಂತಾ, ನಾಗಚೈತನ್ಯ

ಬೆಂಗಳೂರು: ಖ್ಯಾತ ನಟಿ ಸಮಂತಾ ಮತ್ತು ನಟ ನಾಗಚೈತನ್ಯ ವಿವಾಹ ವಿಚ್ಛೇದನ ಘೋಷಿಸಿದ್ದಾರೆ. ಬಹಳಷ್ಟು ಸಮಯದಿಂದ ಈ ಸಂಬಂಧ ಊಹಾಪೋಹಗಳು ಎದ್ದಿದ್ದವು. ಅಂತಿಮವಾಗಿ ಇಬ್ಬರೂ ಪರಸ್ಪರ ಪ್ರತ್ಯೇಕವಾಗುವ ನಿರ್ಧಾರ ಪ್ರಕಟಿಸಿದ್ದಾರೆ.

ಈ ಬಗ್ಗೆ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಒಂದೇ ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಈ ಬಗ್ಗೆ ವದಂತಿಗಳಿದ್ದರೂ ಇಬ್ಬರೂ ಎಲ್ಲಿಯೂ ಅದರ ಬಗ್ಗೆ ಹೇಳಿರಲಿಲ್ಲ.

ಯೇ ಮಾಯಾ ಚೇಸ್ಯಾವೇ ಸಿನಿಮಾದ ಚಿತ್ರೀಕರಣದ ವೇಳೆ ಇಬ್ಬರ ಮಧ್ಯೆ ಪ್ರೇಮವಾಗಿತ್ತು. ಬಳಿಕ 2017ರಲ್ಲಿ ಈ ಜೋಡಿ ಗೋವಾದಲ್ಲಿ ವಿವಾಹಬಂಧನಕ್ಕೆ ಒಳಗಾಗಿತ್ತು. ತೀರಾ ಹತ್ತಿರದ ಗೆಳೆಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಹೀಮದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನಡೆದಿತ್ತು.

Related Articles

Leave a Reply

Your email address will not be published. Required fields are marked *

Back to top button