Breaking NewsLatest

ಲಂಡನ್​ಗೆ ವಾಸ ಬದಲಿಸುವ ಸುದ್ದಿ ಅಲ್ಲಗಳೆದ ಅಂಬಾನಿ; ಪ್ರಶ್ನೆ ಹುಟ್ಟುಹಾಕಿದ 300 ಎಕರೆ ಆಸ್ತಿ ಖರೀದಿ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತವರ ಕುಟುಂಬ ಲಂಡನ್​ನಲ್ಲಿ ವಾಸಿಸಲಿದೆ ಎಂಬ ಸುದ್ದಿ ಹಲವು ಮಾಧ್ಯಮಗಳಲ್ಲಿ ಬಂದ ಬಳಿಕ ರಿಲಯನ್ಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸುದ್ದಿ ಆಧಾರರಹಿತ ಎಂದಿದೆ.

ಲಂಡನ್​ನ ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿ ಬಳಿಕ ಈ ಸುದ್ದಿ ಹುಟ್ಟಿಕೊಂಡಿತ್ತು. ಆದರೆ ಅದನ್ನು ಅಲ್ಲ್ಳೆದ ರಿಲಯನ್ಸ್ ಪ್ರಕಟಣೆ, ಅಂಬಾನಿ ಕುಟುಂಬ ಲಂಡನ್​ಗಾಗಲೀ ಜಗತ್ತಿನ ಇನ್ನಾವುದೇ ಸ್ಥಳಕ್ಕಾಗಲೀ ವಾಸ ಬದಲಿಸುವ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ, ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ 4 ಲಕ್ಷ ಚದರಡಿಯ ನಿವಾಸದಲ್ಲಿ ನೆಲೆಸಿದೆ. ಆದರೆ ಅಂಬಾನಿ ಕುಟುಭಮ ಲಂಡನ್​ನ ಸ್ಟೋಕ್ ಪಾರ್ಕ್​ ಎಸ್ಟೇಟ್​ನಲ್ಲಿ 300 ಎಕರೆ ಆಸ್ತಿ ಖರೀದಿಸಿದ್ದು, ಅದನ್ನು ಮುಖ್ಯ ನಿವಾಸವಾಗಿಸಲು ಯೋಜಿಸಿದೆ ಎಂದು ಈಚಿನ ವರದಿಗಳು ಹೇಳಿದ್ದವು.

Related Articles

Leave a Reply

Your email address will not be published. Required fields are marked *

Back to top button