ತಾಲಿಬಾನ್ ಮೇಲೆ ಕಣ್ಣು; ದೆಹಲಿಯಲ್ಲಿ ನ.10ರಂದು ಭದ್ರತಾ ಶೃಂಗಸಭೆ
ನವದೆಹಲಿ: ತಾಲಿಬಾನಿಗಳ ಮೇಲೆ ಕಣ್ಣಿಟ್ಟಿರುವ ಭಾರತ, ಅಫ್ಘಾನಿಸ್ತಾನದ ಕುರಿತು ಚರ್ಚಿಸಲು ನ. 10ರಂದು ದೆಹಲಿ ಪ್ರಾದೇಶಿಕ ಭದ್ರತಾ ಸಂವಾದವನ್ನು ಆಯೋಜಿಸಿದೆ. ತಾಲಿಬಾನ್ ಸ್ವಾಧೀನದ ನಂತರ ಕಾಬೂಲ್ನಲ್ಲಿನ ಬೆಳವಣಿಗೆಗಳನ್ನು ಚರ್ಚಿಸಲು ಹಿರಿಯ ಭದ್ರತಾ ಅಧಿಕಾರಿಗಳು ಇಲ್ಲಿ ಸೇರಲಿದ್ದಾರೆ.
ಪಾಕಿಸ್ತಾನವನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಪಾಕ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಚೀನಾಕ್ಕೂ ಆಹ್ವಾನ ನೀಡಲಾಗಿದ್ದು, ಔಪಚಾರಿಕ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ವರದಿಯಾಗಿದೆ.
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ರಷ್ಯಾ, ಇರಾನ್ ಮತ್ತು ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರಗಳು ಭಾಗವಹಿಸುವುದು ಖಚಿತವಾಗಿದೆ.
ಇದು ಮೊದಲ ಬಾರಿಗೆ ಮಧ್ಯ ಏಷ್ಯಾದ ಎಲ್ಲಾ ದೇಶಗಳು ಹಾಗೂ ಅಫ್ಘಾನಿಸ್ತಾನದ ತೀರಾನೆರೆಯವಲ್ಲದ ದೇಶಗಳಾದ ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಚರ್ಚೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.