Breaking NewsLatest

ಯುಪಿ ಪೊಲೀಸರ ವಿರುದ್ಧ ರಾಹುಲ್ ಕಿಡಿ; ಲಕ್ನೋ ಏರ್​ಪೋರ್ಟ್​ನಲ್ಲಿ ಕೆಲ ಕಾಲ ಧರಣಿ

ಲಕ್ನೋ: ಲಖಿಂಪುರಕ್ಕೆ ಹೋಗಲು ಲಕ್ಷೋದಲ್ಲಿ ಬಂದಿಳಿದ ರಾಹುಲ್ ಗಾಂಧಿ ತಮ್ಮದೇವಾಹನದಲ್ಲಿ ಹೋಗಲು ಅವಕಾಶ ನೀಡದ ಪೋಲಿಸರ ಕ್ರಮ ಖಂಡಿಸಿ ವಿಮಾನ ನಿಲ್ದಾಣದಲ್ಲಿಯೇ ಧರಣಿ ಕೂತ ಪ್ರಸಂಗ ಜರುಗಿತು.

ಲಕ್ನೋ ಏರ್​ಪೋರ್ಟ್​ನಲ್ಲಿ ರಾಹುಲ್ ಇಳಿಯುತ್ತಿದ್ದಂತೆ ಕಣ್ಣಿಗೆ ಬಿದ್ದಿದ್ದು ಪೊಲೀಸ್ ಕೋಟೆ. ರಾಹುಲ್​ರನ್ನು ಹೊರಗೆ ಬಿಡದಂತೆ ತಡೆಯಲು ನಿಂತಿದ್ದ ಪೊಲೀಸರ ದಂಡಾಗಿತ್ತು ಅದು. ಹೀಗೆ ಹೊರಹೋಗದಂತೆ ತಡೆದು ನಿಲ್ಲಿಸಿದ್ದನ್ನು ಮಾಧ್ಯಮದ ಕೆಮರಾಗಳಿಗೆ ತೋರಿಸುತ್ತ, ಇದೇನಾ ಯುಪಿ ಸರ್ಕಾರ ನಮಗೆ ಕೊಟ್ಟಿರುವ ಅನುಮತಿ ಎಂದು ರಾಹುಲ್ ಪ್ರಶ್ನಿಸಿದರು. ಹೊರಗೇ ಹೋಗುವುದಾದರೆ ತಮ್ಮ ಸುಪರ್ದಿಯಲ್ಲೇ ಹೋಗಬೇಕೆಂಬ ಷರತ್ತು ಹೇರಿದಾಗ ರಾಹುಲ್ ಕಿಡಿಕಿಡಿಯಾದರು. ನೀವ್ಯಾರು ನನ್ನಗೆ ಅನುಮತಿ ಕೊಡುವುದಕ್ಕೆ ಮತ್ತು ನನಗಾಗಿ ವಾಹನದ ವ್ಯವಸ್ಥೆ ಮಾಡುವುದಕ್ಕೆ ಎಂದು ಅವರು ಪೊಲೀಸರನ್ನು ಪ್ರಶ್ನಿಸಿದರು.

ರಾಹುಲ್ ಅವರೊಂದಿಗೆ ಕೆಸಿ ವೇಣುಗೋಪಾಲ್, ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ, ಸುರ್ಜೇವಾಲಾ ಮೊದಲಾದ ನಾಯಕರು ಇದ್ದರು.

ಉತ್ತರ ಪ್ರದೇಶ ಪೊಲೀಸರ ಭದ್ರತೆಯಲ್ಲಿಯೇ ಲಖಿಂಪುರಕ್ಕೆ ತೆರಳಬೇಕೆಂದು ಪೊಲೀಸರು ತಾಕೀತು ಮಾಡಿದಾಗ ರಾಹುಲ್ ಅದನ್ನು ತೀವ್ರವಾಗಿ ವಿರೋಧಿಸಿದರು. ವಿಮಾನನಿಲ್ದಾನದಲ್ಲಿಯೇ ಅವರು ಧರಣಿ ಕೂತ ಬಳಿಕ ಪೊಲೀಸರು ನಿರ್ಧಾರ ಬದಲಿಸಿ, ಸ್ವಂತ ವಾಹನ ಬಳಸಲು ರಾಹುಲ್ ಅವರಿಗೆ ಅವಕಾಶ ಕೊಟ್ಟರು.

ಬಳಿಕ ರಾಹುಲ್ ಗಾಂಧಿ ಸೀತಾಪುರದ ಕಡೆಗೆ ತೆರಳಿದರು. ಸೀತಾಪುರದಲ್ಲಿ ಮೊನ್ನೆ ಬಂಧಿತರಾಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅವರು ರಾಹುಲ್ ಆಗಮನಕ್ಕಾಗಿ ಅಲ್ಲಿ ಕಾದಿದ್ದಾರೆ. ಅಲ್ಲಿಂದ ಇಬ್ಬರೂ ಲಖಿಂಪುರಕ್ಕೆ ತೆರಳಲಿದ್ದಾರೆ.

Related Articles

Leave a Reply

Your email address will not be published.

Back to top button