ಪಂಜಾಬ್ ಅಡ್ವೋಕೇಟ್ ಜನರಲ್ ಡಿಯೋಲ್ ರಾಜೀನಾಮೆ
ಚಂಢೀಘಡ: ಪಂಜಾಬ್ ಅಡ್ವೋಕೇಟ್ ಜನರಲ್ ಅಮರ್ ಪ್ರೀತ್ ಸಿಂಗ್ ಡಿಯೋಲ್ ಸೋಮವಾರ ರಾಜೀನಾಮೆ ನೀಡಿದ್ದಾರೆ.
ನೇಮಕವಾಗಿ ಒಂದು ತಿಂಗಳಲ್ಲೇ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಸಿಎಂಗೆ ತಲುಪಿಸಿದ್ದಾರೆ. ಸೆ.27ರಂದು ಅವರು ಈ ಹುದ್ದೆಗೆ ನೇಮಕಗೊಂಡಿದ್ದರು.
ಅಡ್ವೋಕೇಟ್ ಜನರಲ್ ಆಗಿ ಡಿಯೋಲ್ ನೇಮಕಕ್ಕೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರೋಧವಿತ್ತು. ಡಿಯೋಲ್ ರಾಜೀನಾಮೆ ಬೆನ್ನಲ್ಲೇ ಅದೂ ಸೇರಿದಂತೆ ಇನ್ನೂ ಕೆಲವು ಕಾರಣಗಳಿಗಾಗಿ ಅವರು ರಾಜೀನಾಮೆಯನ್ನೂ ನೀಡಿದ್ದರು.
ಎಪಿಎಸ್ ಡಿಯೋಲ್ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮತ್ತು ಪೊಲೀಸ್ ಗುಂಡಿನ ದಾಳಿಯ ಸಂದರ್ಭದಲ್ಲಿ ಪೊಲೀಸ್ ಮುಖ್ಯಸ್ಥರಾಗಿದ್ದ ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಅವರ ಸಲಹೆಗಾರರಾಗಿದ್ದರು. ಹಾಗಾಗಿ ಡಿಯೋಲ್ರನ್ನು ಅಡ್ವೋಕೇಟ್ ಜನರಲ್ ಆಗಿ ನೇಮಿಸಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಪಂಜಾಬ್ ಪೊಲೀಸರು ಮಾಜಿ ಡಿಜಿಪಿ ಸುಮೇಧ್ ಸಿಂಗ್ ಸೈನಿ ಮೇಲೆ ಹಾಕಿದ್ದ ನಾಲ್ಕು ಕೇಸ್ಗಳಲ್ಲಿ ಸುಮೆಧ್ ಪರವಾಗಿ ಕ್ರಿಮಿನಲ್ ವಕೀಲ ಡಿಯೋಲ್ ವಾದಿಸಿ ಜಾಮೀನು ದೊರಕಲು ಕಾರಣರಾಗಿದ್ದರು. ಇದನ್ನು ಉಲ್ಲೇಖಿಸಿ ಡಿಯೋಲ್ ನೇಮಕವನ್ನು ಸಿಧು ವಿರೋಧಿಸಿದ್ದರು.