Breaking NewsLatestಸಿನಿಮಾ

ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆ ನಾಳೆ; ಕುಟುಂಬದೊಂದಿಗೆ ಚರ್ಚಿಸಿ ತೀರ್ಮಾನ ಪ್ರಕಟಿಸಿದ ಸಿಎಂ

ಬೆಂಗಳೂರು: ಅಗಲಿದ ನಟ ಪುನೀತ್ ರಾಜ್​ಕುಮಾರ್ ಅಂತ್ಯಕ್ರಿಯೆಯನ್ನು ನಾಳೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ಕುಟುಂಬದವರ ಜೊತೆ ಚರ್ಚಿಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಈ ತೀರ್ಮಾನ ಪ್ರಕಟಿಸಿದ್ದಾರೆ.

ನ್ಯೂಯಾರ್ಕ್​ನಿಂದ ಆಗಮಿಸುತ್ತಿರುವ ಮಗಳು ಸಂಜೆಯ ವೇಳೆಗೆ ಬೆಂಗಳೂರು ತಲುಪುತ್ತಿದ್ದಾರೆ. ಅಲ್ಲದೆ ಇನ್ನೂ ಹಲವು ಅಭಿಮಾನಿಗಳು ಪುನೀತ್ ಅಂತಿಮ ದರ್ಶನಕ್ಕಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಬಹಳ ಸಮಯ ಹಿಡಿಯುತ್ತಿದೆ. ಅದಾದ ಮೇಲೆ ಕತ್ತಲೆಯ ವೇಳೆ ಆ ಸಣ್ಣ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸುವುದು ಕಷ್ಟಕರವಾಗುವ ಹಿನ್ನೆಲೆಯಲ್ಲಿ ಕುಟುಂಬದವರ ಜೊತೆ ಚರ್ಚಿಸಲಾಯಿತು. ಕುಟುಂಬದವರ ಒಪ್ಪಿಗೆ ಪಡೆದ ಬಳಿಕ ಸಿಎಂ ಬೊಮ್ಮಾಯಿ, ಪುನೀತ್ ಅಂತ್ಯ ಸಂಸ್ಕಾರವನ್ನು ನಾಳೆ ನಡೆಸುವ ತೀರ್ಮಾನವನ್ನು ಪ್ರಕಟಿಸಿದರು.

ಅಂತಿಮ ದರ್ಶನಕ್ಕೆ ರಾತ್ರಿಯಿಡೀ ಕಾಲಾವಕಾಶ ಇರುವುದರಿಂದ ಅಭಿಮಾನಿಗಳು ಶಾಂತಚಿತ್ತರಾಗಿ ಬಂದು ದರ್ಶನ ಪಡೆಯುವಂತೆ ಸಿಎಂ ವಿನಂತಿಸಿದರು. ಪ್ರತಿಯೊಬ್ಬ ಅಭಿಮಾನಿಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಇದೇ ವೇಳೆ, ರಾಘವೇಂದ್ರ ರಾಜ್​ಕುಮಾರ್ ಶಾಂತಿಯುತವಾಗಿ ವರ್ತಿಸುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

Related Articles

Leave a Reply

Your email address will not be published.

Back to top button