Breaking NewsLatestಸಿನಿಮಾ
ನಾಳೆ ಬೆಳಗ್ಗೆ 6ರಿಂದಲೇ ಪುನೀತ್ ಪಾರ್ಥಿವ ಶರೀರದ ಮೆರವಣಿಗೆ; 10.30ರೊಳಗೆ ಅಂತ್ಯಕ್ರಿಯೆ ಸಾಧ್ಯತೆ
ಬೆಂಗಳೂರು: ಅಗಲಿದ ನಟ ಪುನೀತ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ.
ನಾಳೆ ಬೆಳಗ್ಗೆ 10.30ರೊಳಗಾಗಿ ಪುನೀತ್ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ. ಈ ವಿಚಾರವನ್ನು ನಿರ್ಮಾಪಕ ಸಾ ರಾ ಗೋವಿಂದು ಹೇಳಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಪುನೀತ್ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಬಳಿಕ ಕಂಠೀರವ ಸ್ಟುಡೀಯೋದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.