Breaking NewsLatestಸಿನಿಮಾ

ಪುನೀತ್ ರಾಜ್​ಕುಮಾರ್ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಜನಸಾಗರ

ಬೆಂಗಳೂರು: ಶುಕ್ರವಾರ ನಿಧನರಾದ ನಟ ಪುನೀತ್ ರಾಜ್​ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪುನೀತ್ ನಿಧನದಿಂದ ನಾಡೇ ದಿಗ್ಭ್ರಾಂತಗೊಂಡಿದ್ದು, ಜನಸಾಗರವೇ ಹರಿದುಬರುತ್ತಿದೆ.

ನಿನ್ನೆ ಸಂಜೆಯಿಂದಲೇ ಪುನೀತ್ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾಗಿದೆ. ಸದಾಶಿವನಗರದಲ್ಲಿನ ಮನೆಯಲ್ಲಿ ನೆಡದ ಕೆಲವು ವಿಧಿವಿಧಾನಗಳ ಬಳಿಕ ಕಂಠೀರವ ಕ್ರೀಡಾಂಗಣಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಯಿತು.

ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ಅವರನ್ನು ಕೊನೆಯ ಬಾರಿ ನೋಡಿ ಕಣ್ತುಂಬಿಕೊಳ್ಳಲು ಕಂಠೀರವ ಕ್ರೀಡಾಂಗಣದತ್ತ ಬರುತ್ತಿದ್ದಾರೆ. ನಿನ್ನೆ ಸಂಜೆಯಿಂದಲೇ ಅಲ್ಲಿ ಜನಸಾಗರವೇ ನೆರೆದಿದೆ.

ಪುನೀತ್ ರಾಜ್​ಕುಮಾರ್ ಪಾರ್ಥಿವ ಶರೀರವನ್ನು ಹತ್ತಿರ ಹೋಗಿ ನೋಡುವುದಕ್ಕೆ ಅನುಕೂಲವಾಗುವಂತೆ ಸರತಿ ಸಾಲಿನಲ್ಲಿ ಹೋಗಲು ವ್ಯವಸ್ಥೆ ಮಾಡಲಾಗಿದೆ.

Related Articles

Leave a Reply

Your email address will not be published.

Back to top button