Breaking NewsLatest

ಗಾಜಿಯಾಪುರ ಗಡಿ: ಬ್ಯಾರಿಕೇಡ್ ತೆರವುಗೊಳಿಸಿದ ಪೊಲೀಸರು

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಗಾಜಿಯಾಪುರ ಗಡಿ ಭಾಗದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್​ಗಳನ್ನು ಶುಕ್ರವಾರ ಪೊಲೀಸರು ತೆರವುಗೊಳಿಸಲು ಆರಂಭಿಸಿದ್ದಾರೆ.

ಟಿಕ್ರಿ ಗಡಿಯಲ್ಲಿಯೂ ಇಂಥದೇ ದೃಶ್ಯಗಳು ಗುರುವಾರ ರಾತ್ರಿಯಿಂದಲೇ ಕಂಡುಬಂದವು. ಇದರೊಂದಿಗೆ ವಾಹನ ಸಂಚಾರ ಆರಂಭಕ್ಕೆ ಅನುವಾಗಲಿದೆ.

ಅ.21ರ ಸುಫ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಬ್ಯಾರಿಕೇಡ್ ತೆರವಿಗೆ ಮುಂದಾಗಿದ್ದಾರೆ.

ಪಂಜಾಬ್, ಹರ್ಯಾಣ ಮತ್ತು ಉತ್ತರ ಪ್ರದೇಶದ ರೈತರು ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಲು 2020ರ ನವೆಂಬರ್​ನಿಂದಲೂ ದೆಹಲಿ ಗಡಿಯಲ್ಲಿಯೇ ಸೇರಿದ್ದರು. ಇದರಿಂದ ವ್ಹಾನ ಸಂಚಾರಕ್ಕೆ ಅಡಚಣೆಯಾಗುತ್ತಿರುವ ಬಗ್ಗೆಯೂ ದೂರುಗಳಿದ್ದವು. ಪ್ರತಿಭಟನಾಕಾರರು ಅನಿರ್ದಿಷ್ಠಾವಧಿಗೆ ರಸ್ತೆಗಳನ್ನು ಬ್ಲಾಕ ಮಾಡುವಂತಿಲ್ಲ ಎಂದೂ ಕೋರ್ಟ್ ಹೇಳಿತ್ತು. ರೈತರ ಪ್ರತಿಭಟನೆಗೆ ವಿರೋಧವಿಲ್ಲ. ಆದರೆ ಜನಸಂಚಾರಕ್ಕೆ ಅಡ್ಡಿಪಡಿಸದಂತೆ ಪ್ರತಿಭಟನೆ ನಡೆಯಬೇಕೆಂಬುದು ಕೋರ್ಟ್ ಅಭಿಪ್ರಾಯವಾಗಿತ್ತು. ಸಂಚಾರಕ್ಕೆ ಅನುವಾಗುವಂತೆ ಬ್ಯಾರಿಕೇಡ್​ಗಳನ್ನು ತೆಗೆಯಲು ಕೋರ್ಟ್ ಸೂಚಿಸಿದ್ದ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ತೆರವುಗೊಳಿಸಲಾಗುತ್ತಿದೆ.

Related Articles

Leave a Reply

Your email address will not be published.

Back to top button