Breaking NewsLatest

ಕೇದಾರನಾಥದಲ್ಲಿ ಮೋದಿ ಪ್ರಾರ್ಥನೆ; ಶಂಕರಾಚಾರ್ಯರ ಪ್ರತಿಮೆ ಅನಾವರಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಕೇದಾರನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಅವರು 35 ಟನ್ ತೂಕದ ಆದಿಗುರು ಶಂಕರಾಚಾರ್ಯರ ಭವ್ಯವಾದ 12 ಅಡಿ ಪ್ರತಿಮೆಯನ್ನು ಅನಾವರಣಗೊಳಿಸಿದರು.

ಪ್ರತಿಮೆ ನಿರ್ಮಾಣ ಕೆಲಸವು 2019ರಲ್ಲಿ ಪ್ರಾರಂಭವಾಗಿತ್ತು. ಇದೇ ವೇಳೆ ಶಂಕರಾಚಾರ್ಯರ ಸಮಾಧಿ ನವೀಕರಣ ಕಾರ್ಯವನ್ನೂ ಕೈಗೊಳ್ಳಲಾಗಿತ್ತು.

ಇಂದು ಇಲ್ಲಿ ಆದಿ ಶಂಕರಾಚಾರ್ಯ ಸಮಾಧಿ ಉದ್ಘಾಟನೆಗೆ ನೀವೆಲ್ಲರೂ ಸಾಕ್ಷಿಯಾಗಿದ್ದೀರಿ. ಅವರ ಭಕ್ತರು ಇಲ್ಲಿ ಉತ್ಸಾಹದಿಂದ ಇದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

2013ರ ವಿನಾಶದ ನಂತರ ಕೇದಾರನಾಥವನ್ನು ಪುನರಾಭಿವೃದ್ಧಿ ಮಾಡಬಹುದೇ ಎಂದು ಜನರು ಯೋಚಿಸುತ್ತಿದ್ದರು. ಆದರೆ ಕೇದಾರನಾಥವು ಮತ್ತೆ ಅಭಿವೃದ್ಧಿಗೊಳ್ಳುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

ನಾನು ದೆಹಲಿಯಿಂದಲೇ ಕೇದಾರನಾಥದ ಪುನರಾಭಿವೃದ್ಧಿ ಕಾರ್ಯಗಳನ್ನು ನಿಯಮಿತವಾಗಿ ಪರಿಶೀಲಿಸಿದ್ದೇನೆ. ಇಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಡ್ರೋನ್ ದೃಶ್ಯಾವಳಿಗಳ ಮೂಲಕ ಪರಿಶೀಲಿಸಿದ್ದೇನೆ. ಈ ಕೆಲಸಗಳಿಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಹೇಳಿದರು.

ದೇಗುಲದಲ್ಲಿ 130 ಕೋಟಿ ರೂಪಾಯಿಗಳ ಮರು ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು.

Related Articles

Leave a Reply

Your email address will not be published.

Back to top button