Breaking NewsLatest

ಮನುಷ್ಯ ದೇಹಕ್ಕೆ ಹಂದಿಯ ಮೂತ್ರಪಿಂಡ; ತಾತ್ಕಾಲಿಕ ಕಸಿ ಪ್ರಯೋಗ ಯಶಸ್ವಿ

ವಾಷಿಂಗ್ಟನ್: ಹಂದಿಯ ಮೂತ್ರಪಿಂಡವನ್ನು ತಾತ್ಕಾಲಿಕವಾಗಿ ಒಬ್ಬ ವ್ಯಕ್ತಿಗೆ ಜೋಡಿಸುವಲ್ಲಿ ಅಮೆರಿಕಾದ ವೈದ್ಯಕೀಯ ತಂಡ ಯಶಸ್ವಿಯಾಗಿದೆ. ಈ ಪ್ರಕ್ರಿಯೆಯ ನೇತೃತ್ವ ವಹಿಸಿದ್ದ ಶಸ್ತ್ರಚಿಕಿತ್ಸಕರು ಈ ಅಂಗಕಸಿಯನ್ನು ಸಂಭವನೀಯ ಪವಾಡ ಎಂದೇ ಬಣ್ಣಿಸಿದ್ದಾರೆ.

ಸೆಪ್ಟೆಂಬರ್ ಕಡೇ ವಾರ ನಡೆಸಿದ ಶಸ್ತ್ರಚಿಕಿತ್ಸೆಯಲ್ಲಿ, ಮೆದುಳು ನಿಷ್ಕರಿಯಗೊಂಡಿದ್ದ ವ್ಯಕ್ತಿಯ ಮೇಲೆ ಆತನ ಕುಟುಂಬದವರ ಅನುಮತಿಯೊಂದಿಗೆ ನಡೆದ ಪ್ರಯೋಗ ಯಶಸ್ಸು ಕಂಡಿದೆ. ಆತನಿಗೆ ತಳೀಯವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡವನ್ನು ಅಳವಡಿಸಿದಾಗ ಅದು ಸರಿಯಾಗಿ ಕೆಲಸ ಮಾಡುವುದು ಕಂಡುಬಂದಿದೆ.

ಅದು ಮಾಡಬೇಕಾದುದನ್ನು ಮಾಡಿದೆ. ಅದು ತ್ಯಾಜ್ಯವನ್ನು ತೆಗೆದುಹಾಕಿ ಮತ್ತು ಮೂತ್ರವನ್ನು ಮಾಡುತ್ತದೆ ಎಂದು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕಸಿ ಸಂಸ್ಥೆಯ ನಿರ್ದೇಶಕ ರಾಬರ್ಟ್ ಮಾಂಟ್‌ಗೊಮೆರಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಹಲವಾರು ಶಸ್ತ್ರಚಿಕಿತ್ಸಕರು ಸೇರಿ ನಡೆಸಿದ ಪ್ರಯೋಗ ಇದಾಗಿತ್ತು.

Related Articles

Leave a Reply

Your email address will not be published.

Back to top button