Breaking NewsLatest
ಕೋವಿಡ್ಗೆ ಪರಿಣಾಮಕಾರಿ ಮಾತ್ರೆ; ಫೈಜರ್ ಕಂಪನಿ ಪ್ರತಿಪಾದನೆ
ವಾಷಿಂಗ್ಟನ್: ಕೋವಿಡ್ ರಿಸ್ಕ್ ಕಡಿಮೆ ಮಾಡಬಲ್ಲ ಹೊಸದೊಂದು ಔಷಧ ಲಭ್ಯವಾಗುವ ಸುಳಿವು ಸಿಕ್ಕಿದೆ. ತೀವ್ರತರವಾದ ಕಾಯಿಲೆಗೆ ತುತ್ತಾಗುವ ಅಪಾಯದಲ್ಲಿರುವ ವಯಸ್ಕರು ಆಸ್ಪತ್ರೆಗೆ ದಾಖಲಾಗಬೇಕಾದ ಇಲ್ಲವೆ ಮೃತಪಡುವ ಅಪಾಯವನ್ನು ಶೇ. 89ರಷ್ಟು ಮಟ್ಟಿಗೆ ಇಲ್ಲವಾಗಿಸಬಲ್ಲ ಸಾಮರ್ಥ್ಯವನ್ನು ತಾನು ಉತ್ಪಾದಿಸಿರುವ ಆ್ಯಂಟಿ ವೈರಲ್ ಮಾತ್ರೆ ಹೊಂದಿರುವುದು ಪ್ರಯೋಗದಿಂದ ದೃಢಪಟ್ಟಿರುವುದಾಗಿ ಫೈಜರ್ ಸಂಸ್ಥೆ ಹೇಳಿಕೊಂಡಿದೆ.
ಪೂರ್ಣ ಪ್ರಯೋಗದ ದತ್ತಾಂಸ ಇನ್ನೂ ಲಭ್ಯವಿಲ್ಲ ಎಂದು ವರದಿಯಾಗಿದೆ.
ಪ್ರಯೋಗಕ್ಕೆಸಂಬಂಧಿಸಿದ ಮಧಯಂತರ ವರದಿಯನ್ನು ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿರುವುದಾಗಿ ಕಂಪನಿ ಹೇಳಿದೆ.