Breaking NewsLatest
Abdul Qadeer Khan: ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಅಬ್ದುಲ್ ಖಾದಿರ್ ಖಾನ್ ನಿಧನ
ಇಸ್ಲಾಮಾಬಾದ್: ಪಾಕಿಸ್ತಾನ ದೇಶದ ಅಣ್ವಸ್ತ್ರ ಪಿತಾಮಹ, ಪರಮಾಣು ವಿಜ್ಞಾನಿ ಡಾ. ಅಬ್ದುಲ್ ಖಾದಿರ್ ಖಾನ್ (ಎ.ಕ್ಯೂ. ಖಾನ್) ಇಂದು ಮುಂಜಾನೆ ನಿಧನರಾಗಿದ್ದಾರೆ.
85 ವರ್ಷ ವಯಸ್ಸಿನ ಡಾ. ಅಬ್ದುಲ್ ಖಾದಿರ್ ಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿದ್ದು, ಬೆಳಗ್ಗೆ 7 ಗಂಟೆಗೆ ಇಸ್ಲಾಮಾಬಾದ್ನ ಖಾನ್ ರಿಸರ್ಚ್ ಲ್ಯಾಬೋರೇಟರೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಉಸಿರಾಟ ಸಂಬಂಧಿ ಸಮಸ್ಯೆಯಿಂದ ಅವರನ್ನು ಮುಂಜಾನೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನಹೊಂದಿದ್ದಾರೆ ಎಂದು ಪಾಕಿಸ್ತಾನ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ.
ಡಾ. ಅಬ್ದುಲ್ ಖಾದಿರ್ ಖಾನ್ ಏಪ್ರಿಲ್ 1, 1936ರಂದು ಮಧ್ಯಪ್ರದೇಶ ಭೋಪಾಲ್ನಲ್ಲಿ ಜನಿಸಿದ್ದರು. ಪಶ್ತೂನ್ ಸಮುದಾಯಕ್ಕೆ ಸೇರಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪಡೆದಿದ್ದರು. ಭಾರತ-ಪಾಕ್ ವಿಭಜನೆಯಾದ ನಂತರ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು.