ಪಾಕಿಸ್ತಾನಕ್ಕೆ ಹ್ಯಾಟ್ರಿಕ್ ಜಯ
ದುಬೈ: ನಾಯಕ ಬಾಬರ್ ಅಜಮ್ (51) ಅವರ ಜವಾಬ್ದಾರಿಯುತ ಅರ್ಧ ಶತಕ ಹಾಗೂ ಆಸಿಫ್ ಅಲಿ ಕೇವಲ 7 ಎಸೆತಗಳಲ್ಲೇ ಗಳಿಸಿದ 25* ರನ್ ನೆರವಿನಿಂದ ಅಫಘಾನಿಸ್ತಾನದ ವಿರುದ್ಧ 5 ವಿಕೆಟ್ ಜಯ ಗಳಿಸಿದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಜಯ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫಘಾನಿಸ್ತಾನದ ಆರಂಭ ಉತ್ತಮವಾಗಿರಲಿಲ್ಲ 76 ರನ್ ಗಳಿಸುತ್ತಲೇ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕ ಮೊಹಮ್ಮದ್ ನಬಿ (35) ಮತ್ತು ಗುಲ್ಬದಿನ್ ನಯಿಬ್ (35) ಕೊನೆಯ ಕ್ಷಣದಲ್ಲಿ ಮಿಂಚಿನ ಆಟ ಆಡುವ ಮೂಲಕ ಅಫಘಾನಿಸ್ತಾನ 147 ರನ್ ಸಾಧಾರಣ ಮೊತ್ತ ಕಲೆಹಾಕಿತು.
ಪಾಕಿಸ್ತಾನದ ಆರಂಭವೂ ಉತ್ತಮವಾಗಿರಲಿಲ್ಲ. ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್ ಬೇಗನೇ ಉರುಳಿತು. ನಾಯಕ ಬಾಬರ್ ತಾಳ್ಮೆಯ ಅರ್ಧ ಶತಕ ಗಳಿಸಿ ಜಯಕ್ಕೆ ನೆರವಾದರು. ಕೊನೆಯ ಓವರ್ ನವರೆಗೂ ಪಂದ್ಯ ಸಾಗಿ ಬರುತ್ತಿತ್ತು ಆದರೆ ಕರೀಂ ಜನಾತ್ ಎಸೆದ 19 ನೇ ಓವರ್ ನಲ್ಲಿ ಅಸಿಫ್ ಅಲಿ ನಾಲ್ಕು ಸಿಕ್ಸರ್ ಸಿಡಿಸಿ ಪಂದ್ಯದ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿದರು.