ಪೆಟ್ರೋಲ್ ಬೆಲೆ ಕಡಿತ ಉಪ ಚುನಾವಣೆಯ ಉಪ ಉತ್ಪನ್ನ; ಚಿದಂಬರಂ ವ್ಯಂಗ್ಯ
ಪೆನವದೆಹಲಿ: ಟ್ರೋಲ್ ಬೆಲೆ ಕಡಿತ ಉಪ ಚುನಾವಣೆಯ ಉಪ ಉತ್ಪನ್ನ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಹಲವು ವಾರಗಳ ನಿರಂತರ ಏರಿಕೆಯ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸುವ ಸರ್ಕಾರದ ನಿರ್ಧಾರ ಮೂರು ಲೋಕಸಭೆ ಮತ್ತು 30 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಆದ ಸೋಲಿನ ಪರಿಣಾಮ ಎಂದು ಚಿದಂಬರಂ ಹೇಳಿದ್ದಾರೆ.
ಹೀಗಾಗಿ ಇಂಧನ ಬೆಲೆ ಕಡಿತವು ಉಪ ಚುನಾವಣೆಗಳ ಉಪ ಉತ್ಪನ್ನ ಎಂದು ಅವರು ಕರೆದಿದ್ದಾರೆ.
ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಿನ ತೆರಿಗೆಗಳ ಪರಿಣಾಮವಾಗಿದೆ ಮತ್ತು ಹೆಚ್ಚಿನ ತೆರಿಗೆಗಳು ಕೇಂದ್ರ ಸರ್ಕಾರದ ದುರಾಸೆಯ ಪರಿಣಾಮ ಎಂದು ಅವರು ಟೀಕಿಸಿದ್ದಾರೆ.
30 ಅಸೆಂಬ್ಲಿ ಮತ್ತು 3 ಲೋಕಸಭಾ ಉಪ ಚುನಾವಣೆಗಳ ಫಲಿತಾಂಶವು ಈ ಬೆಲೆ ಕಡಿತವೆಂಬ ಉಪ ಉತ್ಪನ್ನಕ್ಕೆ ಕಾರಣವಾಗಿದೆ. ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ!” ಎಂದು ರಾಜ್ಯಸಭಾ ಸಂಸದ ಚಿದಂಬರಂ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಗೆದ್ದ ಸ್ಥಾನಗಳು ಮತ್ತು ಪಕ್ಷ ಸೋತಿರುವಲ್ಲಿ ಎದುರಾಳಿಯ ಗೆಲುವಿನ ಅಂತರ ತೀರಾ ಕಡೊಮೆಯಿರುವುದು ಕಾಂಗ್ರೆಸ್ ಪರವಾದ ಅಲೆಯನ್ನು ಖಚಿತಪಡಿಸಿದೆ ಎಂದು ಮಾಜಿ ಕೇಂದ್ರ ಸಚಿವ ಚಿದಂಬರಂ ವಿಶ್ಲೇಷಿಸಿದ್ದಾರೆ.