Breaking NewsLatest

ಬಿಜೆಪಿ ಸಂಸದನ ಫೇಕ್ ಖಾತೆ ವಿರುದ್ಧ ಕ್ರಮ ಕೈಗೊಳ್ಳದ ಫೇಸ್​ಬುಕ್; ಮಾಜಿ ದತ್ತಾಂಶ ವಿಜ್ಞಾನಿ ಆರೋಪ

ನವದೆಹಲಿ: ಕಳೆದ ವರ್ಷ ನಡೆದ ದೆಹಲಿ ಚುಬಾವಣೆ ಸಂದರ್ಭದಲ್ಲಿ ನಕಲಿ ಖಾತೆಗಳ ವಿಚಾರದಲ್ಲಿ ಫೇಸ್​ಬುಕ್ ತೆಗೆದುಕೊಂಡಿದ್ದ ಕ್ರಮ ಸೆಲೆಕ್ಟಿವ್ ಆಗಿತ್ತು ಎಂದು ಅದರ ಮಾಜಿ ದತ್ತಾಂಶ ವಿಜ್ಞಾನಿ ಸೋಫಿಯಾ ಝಂಗ್ ಆರೋಪಿಸಿದ್ದಾರೆ.

ಚುನಾವಣೆ ವೇಳೆ ಜನರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ಮತ್ತ ಉಆಮ್ ಆದ್ಮಿ ಪಾರ್ಟಿಗಳು ನಕಲಿ ಖಾತೆಗಳನ್ನು ಬಳಸಿದ್ದವು. ಆದರೆ ಬಿಜೆಪಿ ಸಂಸದರಿಗೆ ಸಂಬಂಧಿಸಿದ ನಕಲಿ ಖಾತೆಗಳ ವಿರುದ್ಧ ಮಾತ್ರ ಫೇಸ್​ಬುಕ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ವಿಚಾರವನ್ನು ಸೋಫಿಯಾ ಬಹಿರಂಗಪಡಿಸಿದ್ದಾರೆ.

ಕಳೆದ ವರ್ಷದವರೆಗೂ ಫೇಸ್​ಬುಕ್​ಗಾಗಿ ಕೆಲಸ ಮಾಡಿದ್ದ ಸೋಫಿಯಾ ಎನ್​ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಈ ವಿಚಾರ ಹೇಳಿದ್ದಾರೆ.

2019ರ ಕಡೆಯಲ್ಲಿ ನಾಲ್ಕು ನಕಲಿ ನೆಟ್​ವರ್ಕ್​ಗಳು ಪತ್ತೆಯಾದವು. ಅವುಗಳಲ್ಲಿ ಎರಡು ಬಿಜೆಪಿಯನ್ನೂ ಇನ್ನೆರಡು ಕಾಂಗ್ರೆಸ್​ನ್ನೂ ಬೆಂಬಲಿಸುತ್ತಿದ್ದವು. ಅವುಗಳಲ್ಲಿ ಕಾಂಗ್ರೆಸ್​ಗೆ ಸಂಬಂಧಿಸಿದ ಎರಡೂ ನೆಟ್​ವರ್ಕ್ ಮತ್ತು ಬಿಜೆಪಿಗೆ ಸಮಬಮಧಪಟ್ಟ ಒಂದನ್ನು ಸ್ಥಗಿತಗೊಳಿಸಿದೆವು. ಇನ್ನೊಂದರ ವಿರುದ್ಧ ಕ್ರಮ ಕೈಗೊಳ್ಳು ಮುಂದಾದಾಗ ಅದನ್ನು ತಡೆಯಲಾಯಿತು. ಅದನ್ನು ಬಿಜೆಪಿಯ ರಾಜಕಾರಣಿಯೇ ಖುದ್ದಾಗಿ ನಿರ್ವಹಿಸುತ್ತಿರುವುದಾಗಿ ತಿಳಿದುಬಂದದ್ದೇ ಫೇಸ್​ಬುಕ್​ನ ಈ ನಡೆಗೆ ಕಾರಣವಾಗಿತ್ತು. ಆ ನೆಟ್​ವರ್ಕ್ ವಿಚಾರದಲ್ಲಿ ನಾನೇನೂ ಕ್ರಮ ಕೈಗೊಳ್ಳುವುದು ಸಾಧ್ಯವಾಗಲಿಲ್ಲ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವಿಚಾರವಾಗಿ ಮತ್ತೆ ಮತ್ತೆ ನೆನಪಿಸಿದರೂ ಫೇಸ್​ಬುಕ್ ಕ್ರಮ ಕೈಗೊಳ್ಳುವುದು ಹಾಗಿರಲಿ, ಅದನ್ನು ಗಮನಿಸಲೂ ಇಲ್ಲ ಎಂದು ಸೋಫಿಯಾ ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button