Breaking NewsLatest
ನೇಪಾಳ ಬಸ್ ದುರಂತ; 29ಕ್ಕೂ ಹೆಚ್ಚು ಮಂದಿ ಸಾವು
ಕಠ್ಮಂಡು: ಬಸ್ ನದಿಗೆ ಉರುಳಿದ ಪರಿಣಾಮ 28ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ದುರ್ಘಟನೆ ಮುಗು ಜಿಲ್ಲೆಯಲ್ಲಿ ಸಂಭವಿಸಿದೆ.
ಬಸ್ನ ಮುಂದಿನ ಟೈರ್ ಪಂಕ್ಚರ್ ಆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಂಕೆ ಜಿಲ್ಲೆಯಿಂದ ಮುಗು ಕಡೆಗೆ ಬಸ್ ಹೊರಟಿತ್ತು. 45 ಪ್ರಯಾಣಿಕರು ಇದ್ದರೆನ್ನಲಾಗಿದ್ದು, ಹೆಚ್ಚಿನವರು ವಿಜಯದಶಮಿ ಆಚರಣೆಗೆ ತೆರಳಿದ್ದವರಾಗಿದ್ದರು ಎಂದು ಹೆಳಲಾಗಿದೆ.
ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಗುರುತಿಸುವ ಯತ್ನ ನಡೆದಿದೆ.