ಆರ್ಯನ್ ಖಾನ್ ಕೇಸ್: ಎನ್ಸಿಬಿ ಅಧಿಕಾರಿ ವಾಂಖೇಡೆ ವಿರುದ್ಧ ಮಹಾರಾಷ್ಟ್ರ ಮಂತ್ರಿ ಆರೋಪ
ಮುಂಬೈ: ಆರ್ಯನ್ ಖಾನ್ ಪ್ರಕರಣದ ತನಿಖೆಯ ಮಧ್ಯೆಯೇ ಡ್ರಗ್ಸ್ ನಿಗ್ರಹ ಸಂಸ್ಥೆ ವಿರುದ್ಧದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ನಿರಂತರ ದಾಳಿ ಮುಂದುವರಿದಿದೆ. ತನಿಖೆಯ ನೇತೃತ್ವ ವಹಿಸಿರುವ ಅಧಿಕಾರಿ ಸಮೀರ್ ವಾಂಖೇಡೆ 26 ಪ್ರಕರಣಗಳಲ್ಲಿ ಸರಿಯಾದ ನಿಯಮಗಳನ್ನು ಪಾಲಿಸಿಲ್ಲ ಎಂದು ಮಲಿಕ್ ಆರೋಪಿಸಿದ್ದಾರೆ.
ಹೆಸರು ಬಹಿರಂಗಪಡಿಸದ ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಉದ್ಯೋಗಿಯೊಬ್ಬರ ಪತ್ರವನ್ನು ಉಲ್ಲೇಖಿಸಿರುವ ಮಲಿಕ್, ಈ ವಾಂಖೆಡೆಯನ್ನು ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಸಿಬಿಐ ಅಧಿಕಾರಿ ರಾಕೇಶ್ ಅಸ್ಥಾನಾ ಅವರು ಎನ್ಸಿಬಿಗೆ ಕರೆತಂದಿದ್ದಾರೆ ಎಂದು ಹೇಳಿದ್ದಾರೆ.
ಪತ್ರದಲ್ಲಿ 26 ಪ್ರಕರಣಗಳನ್ನು ಉಲ್ಲೇಖಿಸಲಾಗಿದ್ದು, ಈ 26 ಪ್ರಕರಣಗಳಲ್ಲಿ ಸಮೀರ್ ವಾಂಖೇಡೆ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ಆದರೆ, ಆರೋಪಗಳನ್ಗನು ನಿರಾಕರಿಸಿರುವ ಎನ್ಸಿಬಿ ಅಧಿಕಾರಿ ವಾಂಖೇಡೆ, ಅವನ್ನು ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಕರೆದಿದ್ದಾರೆ. ಅದು ಅವರ ಹಕ್ಕು, ಅವರು ತಮ್ಮ ಅಭಿಪ್ರಾಯ ಮಂಡಿಸಬಹುದು ಎಂದು ಮಹಾರಾಷ್ಟ್ರ ಸಚಿವರ ಆರೋಪಕ್ಕೆ ವಾಂಖೇಡೆ ಪ್ರತಿಕ್ರಿಯಿಸಿದ್ದಾರೆ.