Breaking NewsLatestಸಿನಿಮಾ
ಪುನೀತ್ ನಿಧನಕ್ಕೆ ಎಂಕೆ ಸ್ಟಾಲಿನ್ ಸಂತಾಪ
ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನಕ್ಕೆ ತಮಿಳ್ನಾಡು ಸಿಎಂ ಎಂಕೆ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪುನೀತ್ ಸಹೋದರ ಶಿವರಾಜ್ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಪುನೀತ್ ಅಕಾಲಿಕ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು, ರಾಜ್ ಕುಟುಂಬದೊಂದಿಗಿನ ತಮ್ಮ ಕುಟುಂಬದ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.
ತಂದೆ ಕರುಣಾನಿಧಿಯವರ ಮರಣದ ವೇಳೆ ಸಂತಾಪ ವ್ಯಕ್ತಪಡಿಸಲು ತಮ್ಮ ಗೋಪಾಳಪುರಂ ನಿವಾಸಕ್ಕೆ ಪುನೀತ್ ಭೇಟಿ ನೀಡಿದ್ದನ್ನು ಸ್ಟಾಲಿನ್ ಪತ್ರದಲ್ಲಿ ಸ್ಮರಿಸಿದ್ದಾರೆ.
ಅಪ್ಪು ನೆನಪು ನಮ್ಮೊಂದಿಗೆ ಸದಾ ಇರುತ್ತದೆ. ರಾಜ್ ಕುಟುಂಬದ ಹಿರಿಯ ಮಗನಾಗಿ, ಈ ನೋವಿನ ಸಂದರ್ಬದಲ್ಲಿ ಕುಟುಂದ ಎಲ್ಲರಿಗೂ ಧೈರ್ಯ ತುಂಬುವ ಶಕ್ತಿ ನಿಮ್ಮದಾಗಲಿ ಎಂದು ಶಿವರಾಜ್ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.