Breaking NewsLatest

ಕೊಲೆ ಕೇಸ್ ದಾಖಲಾಗಿದ್ದರೂ ಬಂಧನವಿಲ್ಲ; ವಿಚಾರಣೆಗೂ ಹಾಜರಾಗದ ಮಂತ್ರಿ ಪುತ್ರ

ನವದೆಹಲಿ: ರೈತರ ಮೇಲೆ ಕಾರು ಹರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮಂತ್ರಿ ಪುತ್ರ ಪೊಲೀಸ್ ವಿಚಾರಣೆಗೆ ಹಾಜರಾಗಿಲ್ಲ.

ಭಾನುವಾರ ನಡೆದ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ವಾರವೇ ಸಮೀಪಿಸುತ್ತ ಬಂದರೂ ಬಂಧಿಸಿಲ್ಲ.

ಆತನ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದರೂ ಬಂಧಿಸದೆ, ವಿಚಾರಣೆಗೆ ಹಾಜರಾಗುವಂತೆ ನಿನ್ನೆ ನೊಟೀಸ್ ನೀಡಲಾಗಿತ್ತು. ಅದರಂತೆ ಇಂದು ಬೆಳಗ್ಗೆ ಆತ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆತ ವಿಚಾರಣೆಗೆ ಗೈರಾಗಿದ್ದಾನೆ. ವಿಚಾರಣೆಗೆ ಹಾಜರಾಗಲು ಹೆಚ್ಚಿನ ಸಮಯ ಕೇಳಿರುವುದಾಗಿ ವರದಿಯಾಗಿದೆ.

ಈ ನಡುವೆ, ನಿನ್ನೆ ಸುಪ್ರೀಂ ಕೋರ್ಟ್, ಘಟನೆ ಬಗ್ಗೆ ಕೈಗೊಂಡಿರುವ ಕ್ರಮ ಕುರಿತು ವರದಿ ಕೇಳಿದ್ದು, ವಿಚಾರಣೆ ಮತ್ತೆ ಆರಂಭವಾಗಿದೆ.

Related Articles

Leave a Reply

Your email address will not be published.

Back to top button