Breaking NewsLatest
ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ವಕೀಲನ ಹತ್ಯೆ; ಶಹಜಾನ್ಪುರದಲ್ಲಿ ಆಘಾತಕಾರಿ ಘಟನೆ
ಉತ್ತರ ಪ್ರದೇಶದ ಶಹಜಾನ್ಪುರ ಜಿಲ್ಲಾ ಕೋರ್ಟ್ ಆವರಣದಲ್ಲಿಯೇ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ.
ಮೃತ ನ್ಯಾಯವಾದಿಯನ್ನು ಭೂಪೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಕೋರ್ಟ್ನ ಮೂರನೇ ಮಹಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಸಮೀಪವೇ ದೇಸೀ ಪಿಸ್ತೂಲ್ ಕೂಡ ಸಿಕ್ಕಿದೆ.
ಘಟನೆ ನಡೆದ ವೇಳೆ ಅವರು ಯಾರೊಂದಿಗೋ ಮಾತನಾಡುತ್ತಿದ್ದರು ಎನ್ನಲಾಗಿದೆ. ಆಗ ಅವರ ಸುತ್ತ ಯಾರೂ ಕಾಣಿಸಿರಲಿಲ್ಲ. ಇದ್ದಕ್ಕಿದ್ದಂತೆ ದೊಡ್ಡ ಗದ್ದಲ ಕೇಳಿಬಂದು ವಕೀಲರು ನೆಲದ ಮೇಲೆ ಬಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿರುವುದಾಗಿ ವರದಿಯಾಗಿದೆ. ಇಡೀ ಘಟನೆ ಹೇಗಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಸೀಲನೆ ನಡೆಸಿದ್ದಾರೆ.