Breaking NewsLatest

ಲಖೀಂಪುರ ಹತ್ಯೆ: ದಿನನಿತ್ಯದ ತನಿಖೆ ಉಸ್ತುವಾರಿಗೆ ಹೈಕೋರ್ಟ್​ ನಿವೃತ್ತ ನ್ಯಾಯಾಧೀಶರು; ಸುಪ್ರೀಂ ಆದೇಶ

ನವದೆಹಲಿ: ಲಖೀಂಪುರ ಖೇರಿ ರೈತರ ಹತ್ಯೆ ಪ್ರಕರಣ ಸಂಬಂಧ ತನಿಖೆಯ ಮೇಲುಸ್ತುವಾರಿಯನ್ನು ಹೈಕೋರ್ಟ್ ನಿವೃತ್ತ ನ್ಯಾಐಆಧೀಶರನ್ನು ನೇಮಿಸುವ ಆದೇಶವನ್ನು ಸೋಮವಾರ ಸುಪ್ರೀಂ ಕೋರ್ಟ್ ನೀಡಿದೆ.

ಎರಡ ವಾರಗಳ ಬಳಿಕ ಇಂದು ಮತ್ತೆ ಲಖೀಂಪುರ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಕೊಂಡಿತು. ಹಿಂದಿನ ವಿಚಾರಣೆ ವೇಳೆ, ಬರೀ 23 ಸಾಕ್ಷಿಗಳೇ ಎಂದು ಪ್ರಶ್ನಿಸಿದ್ದ ಕೊರ್ಟ್, ಇನ್ನಷ್ಟು ಸಾಕ್ಷಿಗಳನ್ನು ಕಲೆಹಾಕಲು ಆದೇಶಿಸಿತ್ತು. ತನಿಖೆಯಲ್ಲಿನ ವಿಳಂಬ ಗತಿಗೂ ಅದು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಪ್ರತಿಭಟನೆ ವೇಳೆ ಗುಂಪಿನ ಮೇಲೆ ಕಾರು ಹರಿಸಿ ಹತ್ಯೆ ಮಾಡಲಾದ ಪ್ರಕೆಣದಲ್ಲಿ ನಾಲ್ವರು ರೈತರೂ ಸೇರಿ 8 ಮಂದಿ ಮೃತಪಟ್ಟಿದ್ದರು. ಮೃತಪಟ್ಟ ಇತರ ನಾಲ್ವರಲ್ಲಿ ಓರ್ವ ಪತ್ರಕರ್ತನೂ ಸೇರಿದ್ದು, ರಮಣ್ ಕಶ್ಯಪ್ ಎಂದು ಗುರುತಿಸಲಾಗಿತ್ತು. ಕೇಂದ್ರ ಮಂತ್ರಿ ಅಜಯ್ ಮಿಶ್ರಅ ಪುತ್ರ ಆಶಿಶ್ ಮಿಶ್ರಾ ಈ ಪ್ರಕರಣದ ಪ್ರಮುಖ ಆರೋಪಿ. ರೈತರ ಸಾವಿಗೆ ಸಂಬಮಧಿಸಿದಂತೆ ಒಂದು ಎಫ್​ಐಆರ್ ಮತ್ತು ಪತ್ರಕರ್ತ ಅಲ್ಲದೆ ಮೂವರು ಬಿಜೆಪಿ ಕಾರ್ಯಕರ್ತರ ಸಾವಿಗೆ ಸಂಬಂಧಿಸಿ ಇನ್ನೊಂದು ಎಫ್​ಐಆರ್ ದಾಖಲಾಗಿದ್ದವು.

ಮೃತಪಟ್ಟಿದ್ದ ಪತ್ರಕರ್ತ ರಮಣ್ ಕಶ್ಯಪ್, ಪ್ರಮುಖ ಆರೋಪಿ ಆಶಿಶ್ ಮಿಶ್ರಾ ತಂಡದ ಭಾಗವಾಗಿದ್ದರೇ ಎಂಬ ಗೊಂದಲ ಇತ್ತು. ಆದರೆ ನಂತರ ಅವರು ದೊಡ್ಡ ಮಟ್ಟದಲ್ಲಿ ಸೇರಿದ್ದ ಗುಂಪಿನ ಭಾಗವಾಗಿದ್ದರು ಮತ್ತು ಕಾರು ಹರಿದು ಸಾವನ್ನಪ್ಪಿದ್ದಾರೆ ಎಂಬುದು ತಿಳಿದಿದೆ ಎಂದು ನ್ಯಾಯಾಲಯದ ಎದುರು ಯುಪಿ ಸರ್ಕಾಋದ ಪರವಾಗಿ ವಕೀಲ ಸಾಳ್ವೆ ಹೇಳಿದರು.

ಆಗ, ಇಂಥ ಗೊಂದಲಗೀರುವುದರಿಂದಾಗಿಯೇ, ಉಸ್ತುವಾರಿಯ ಅಗತ್ಯವಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.

ನಡೆಯುತ್ತಿರುವ ಪ್ರತಿಯೊಂದತ ಹಿಂದೆಯೂ ರಾಜಕೀಯವಿದೆ ಎಂದು ಸಾಳ್ವೆ ಹೇಳಿದಾಗ, ಇದರಲ್ಲಿ ರಾಜಕೀಯ ಸೇರಿಸಲು ನಾವು ಬಯಸುವುದಿಲ್ಲ. ನಿವೃತ್ತ ನ್ಯಾಯಾಧೀರು ಇದನ್ನು ನೋಡಿಕೊಳ್ಳಲಿ ಎಂದು ಸಿಜೆಐ ಎನ್​ವಿ ರಮಣ್ ಹೇಳಿದರು.

ಎರಡು ಎಫ್‌ಐಆರ್‌ಗಳ (ರೈತರ ಹತ್ಯೆ ಮತ್ತು ರಾಜಕೀಯ ಕಾರ್ಯಕರ್ತರ ಹತ್ಯೆ) ನಡುವಿನ ಅಂತರವನ್ನು ಕಾಯ್ದುಕೊಳ್ಳಲು ಯಾವುದೋ ಕಾರಣಕ್ಕಾಗಿ ಎಸ್‌ಐಟಿಗೆ ಸಾಧ್ಯವಾಗುತ್ತಿಲ್ಲ ಎಂದು ತೋರುತ್ತದೆ. ಮುಂದೆ ಬರುವ ಪ್ರತಿಯೊಬ್ಬರ ಹೇಳಿಕೆಗಳನ್ನು ಅವರು ದಾಖಲಿಸಬೇಕು ಅಂತಲ್ಲ. ಎರಡು ಎಫ್‌ಐಆರ್‌ಗಳ ಸಾಕ್ಷ್ಯವನ್ನು ಪ್ರತ್ಯೇಕವಾಗಿ ದಾಖಲಿಸಬೇಕಿರುವುದನ್ನು ಖಚಿತಪಡಿಸಿಕೊಳ್ಳಲು ದಿನನಿತ್ಯದ ತನಿಖೆಯ ಮೇಲ್ವಿಚಾರಣೆಯನ್ನು ಬೇರೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಿಗೆ ವಹಿಸಲು ಬಯಸುತ್ತೇವೆ. ನಿಮ್ಮ ರಾಜ್ಯ ಸರ್ಕಾರದ ಕಡೆಯಿಂದ ನ್ಯಾಯಾಧೀಶರು ನಮಗೆ ಬೇಡ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ರಂಜೀತ್ ಸಿಂಗ್ ಅಥವಾ ನ್ಯಾಯಮೂರ್ತಿ ರಾಕೇಶ್ ಕುಮಾರ್ ಬಗ್ಗೆ ಯೋಚಿಸೋಣ ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

Related Articles

Leave a Reply

Your email address will not be published.

Back to top button