Breaking NewsLatest

ಮೊದಲ ಪಂದ್ಯದಲ್ಲೇ ಎದುರಾಳಿಗೆ ಶಾಕ್ ನೀಡಿದ ವೈಶಾಖ್

ಗುವಾಹಟಿ: ನಾಯಕ ಮನೀಶ್ ಪಾಂಡೆ ಅವರ ಅರ್ಧ ಶತಕ (51) ಹಾಗೂ ವೈಶಾಖ್ ವಿಜಯ ಕುಮಾರ್ (25ಕ್ಕೆ3) ಅವರ ಅದ್ಭುತ ಬೌಲಿಂಗ್ ನೆರವಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಸರ್ವಿಸಸ್ ವಿರುದ್ಧ 35 ರನ್ ಜಯ ಗಳಿಸಿದೆ.

ಈ ಜಯದೊಂದಿಗೆ ರಾಜ್ಯ ತಂಡ ಸತತ ಮೂರನೇ ಜಯ ಗಳಿಸಿ ಹ್ಯಾಟ್ರಿಕ್ ಜಯದ ಸಾಧನೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ನಾಯಕ ಪಾಂಡೆ 48 ಎತೆಗಳನ್ನೆದುರಿಸಿ ತಾಳ್ಮೆಯ 51 ರನ್ ಗಳಿಸಿ ಸವಾಲಿನ ಮೊತ್ತಕ್ಕೆ ನೆರವಾದರು. ಮಯಾಂಕ್ ಅಗರ್ವಾಲ್ (29) ಮತ್ತು ಅನಿರುಧ್ ಜೋಶಿ (23) ತಂಡಕ್ಕೆ ನೆರವಾದರು.

143 ರನ್ ಗುರಿಹೊತ್ತ ಸರ್ವಿಸಸ್ ಚೊಚ್ಚಲ ಪಂದ್ಯವನ್ನಾಡುತ್ತಿರುವ ವೈಶಾಖ್ ವಿಜಯ ಕುಮಾರ್ (25ಕ್ಕೆ 3) ಅವರ ದಾಳಿಗೆ ಸಿಲುಕಿ ಕೇವಲ 109 ರನ್ ಗಳಿಸಿತು.‌ ಪದಾರ್ಪಣೆ ಮಾಡಿದ ಇನ್ನೋರ್ವ ಆಟಗಾರ ದರ್ಶನ್ ಎಂ.ಬಿ. (30ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿ ಜಯಕ್ಕೆ ನೆರವಾದರು.

Related Articles

Leave a Reply

Your email address will not be published.

Back to top button