Breaking NewsLatestಸಿನಿಮಾ

ಪುನಿತ್​ ರಾಜ್​ಕುಮಾರ್​ಗೆ ಜ್ಯೂ. ಎನ್​ಟಿಆರ್ ಅಂತಿಮ ಗೌರವ ಸಲ್ಲಿಕೆ

ಬೆಂಗಳೂರು: ತೆಲುಗಿನ ಖ್ಯಾತ ನಟ ಜ್ಯೂ. ಎನ್​ಟಿಆರ್ ಅಗಲಿದ ನಟ ಪುನೀತ್ ರಾಜ್​ಕುಮಾರ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ ಜ್ಯೂ. ಎನ್​ಟಿಆರ್, ಪುನೀತ್ ಪಾರ್ಥಿವ ಶರೀರ ನೋಡುತ್ತಲೇ ಭಾವುಕರಾಗಿ, ಅವರನ್ನೇ ದಿಟ್ಟಿಸುತ್ತ ನಿಂತಿದ್ದರು. ಪಾರ್ಥಿವ ಶರೀರವನ್ನು ನೋಡುತ್ತ ದುಃಖಿತರಾದ ಅವರು ಶಿವರಾಜ್​ಕುಮಾರ್ ಅವರನ್ನು ಅಲಿಂಗಿಸಿಕೊಂಡು ಶೋಕ ವ್ಯಕ್ತಪಡಿಸಿದರು. ಮತ್ತೆ ಮತ್ತೆ ಪುನೀತ್ ಪಾರ್ಥಿವ ಶರೀರವನ್ನು ಅವರು ನೋಡುತ್ತ ಶಿವರಾಜ್​ಕುಮಾರ್​ ಅವರಿಗೆ ಸಾಂತ್ವನ ಹೇಳಿದರು.

ಜ್ಯೂ. ಎನ್​ಟಿಆರ್ ಆಗಮನದ ಹಿನ್ನೆಲೆಯಲ್ಲಿ ಕೆಲಕಾಲ ಸ್ಟೇಡಿಯಂನಲ್ಲಿ ನೂಕುನುಗ್ಗಲು ಉಂಟಾಗಿತ್ತು.

Related Articles

Leave a Reply

Your email address will not be published. Required fields are marked *

Back to top button