Breaking NewsLatest
ಇ.ಡಿ ಅರ್ಜಿ ತಿರಸ್ಕರಿಸಿದ ಕೋರ್ಟ್; ಅನಿಲ್ ದೇಶ್ಮುಖ್ಗೆ ನ್ಯಾಯಾಂಗ ಬಂಧನ
ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಮುಂಬೈನ ರಜಾ ದಿನದ ವಿಶೇಷ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮನಿ ಲಾಂಡರಿಂಗ್ ಕೇಸ್ನಲ್ಲಿ ವಿಚಾರಣೆ ಎದುರಿಸುತ್ತಿರುವ ಅವರನ್ನು ಇನ್ನೂ 9 ದಿನಗಳ ಕಾಲ ತನ್ನ ವಶಕ್ಕೆ ನೀಡಬೇಕೆಂದು ಕೋರಿದ್ದ ಜಾರಿ ನಿರ್ದೆಶನಾಲಯದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.
ಈ ನಡುವೆ ದೇಶ್ಮುಖ್ ಪುತ್ರ ಹೃಷಿಕೇಶ್ ದೇಶ್ಮುಖ್, ಜಾರಿ ನಿರ್ದೇಶನಾಲಯ ದಾಖಲಿಸಿರುವ ಕೇಸ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಅಂತಿಮ ವಿಚಾರಣೆಯನ್ನು ನ.12ಕ್ಕೆ ಮುಂದೂಡಿರುವ ಕೋರ್ಟ್, ಅಲ್ಲಿಯವರೆಗೆ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಅನಿಲ್ ದೇಶ್ಮುಖ್ ಅವರನ್ನು ನ.2ರಂದು ಇ.ಡಿ ಬಂಧಿಸಿತ್ತು.