Breaking NewsLatestಇತರ ಕ್ರೀಡೆ
ಭಾರತಕ್ಕೆ ಸ್ಯಾಫ್ ಫುಟ್ಬಾಲ್ ಕಿರೀಟ
ಮಾಲೆ, ಮಾಲ್ಡೀವ್ಸ್: ನೇಪಾಳ ವಿರುದ್ಧ 3-0 ಗೋಲುಗಳಿಂದ ಜಯ ಗಳಿಸಿದ ಭಾರತ ಫುಟ್ಬಾಲ್ ತಂಡ 8 ನೇ ಬಾರಿಗೆ ದಕ್ಷಿಣ ಏಷ್ಯಾ ಫುಟ್ಬಾಲ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ದ್ವಿತೀಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿದ ಸುನಿಲ್ ಛೆಟ್ರಿ ಪಡೆ ನೂತನ ಕೋಚ್ ಐಗರ್ ಸ್ಟಿಮ್ಯಾಕ್ ಅವರಿಗೆ ಮೊದಲ ಪ್ರಶಸ್ತಿಯನ್ನು ಉಡುಗೊರೆಯಾಗಿ ನೀಡಿತು.
ಪ್ರಥಮಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು ಆದರೆ ಛೆಟ್ರಿ 49ನೇ ನಿಮಿಷದಲ್ಲಿ ತಂಡದ ಪರ ಮೊದಲ ಗೋಲು ಗಳಿಸಿ ಅಂತಾರಾಷ್ಟ್ರೀಯ ಫುಟ್ಬಾಲ್ ನಲ್ಲಿ 80ನೇ ಗೋಲು ಗಳಿಸಿದರು ನಂತರ ಸುರೇಶ್ ಸಿಂಗ್ ವಾಂಗ್ಜಾಮ್ ಮತ್ತು ಯಾಸೀರ್ ಮೊಹಮ್ಮದ್ ನಂತರದ ಗೋಲುಗಳನ್ನು ಗಳಿಸುವುದರೊಂದಿಗೆ ಭಾರತ 3-0 ಅಂತರದಲ್ಲಿ ಜಯ ಗಳಿಸಿತು.