Breaking NewsLatest

ಚೀನಾದಿಂದ ಏಕಪಕ್ಷೀಯ ಹೊಸ ಭೂ ಗಡಿ ಕಾಯ್ದೆ; ಭಾರತ ಕಳವಳ

ನವದೆಹಲಿ: ಹೊಸ ಭೂ ಗಡಿ ಕಾನೂನನ್ನು ತರುವ ಚೀನಾದ ಏಕಪಕ್ಷೀಯ ನಿರ್ಧಾರವು ಗಡಿ ನಿರ್ವಹಣೆಯಲ್ಲಿ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ಕಳವಳ ವ್ಯಕ್ತಪಡಿಸಿದೆ.

ಇತ್ಯರ್ಥವಾಗದ ‘ಗಡಿ ಪ್ರಶ್ನೆ’ಯ ಮೇಲೆ ಚೀನಾ ಶಾಸನವು ಪ್ರಭಾವ ಬೀರಬಹುದು ಎಂದು ಭಾರತ ಹೇಳಿದೆ.

ಭಾರತ ಮತ್ತು ಚೀನಾ ನಡುವೆ ಇನ್ನೂ ಗಡಿ ಪ್ರಶ್ನೆ ಬಗೆಹರಿದಿಲ್ಲ. ಈ ನಡುವೆಯೇ, ಗಡಿ ನಿರ್ವಹಣೆ ಮತ್ತು ಗಡಿ ಪ್ರಶ್ನೆಯ ಮೇಲೆ, ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಪರಿಣಾಮ ಬೀರುವ ಶಾಸನವನ್ನು ತರುವ ಚೀನಾದ ಏಕಪಕ್ಷೀಯ ನಿರ್ಧಾರವು ಕಳವಳಕಾರಿ ಎಂದು ವಿದೇಶಾಂಗ ಖಾತೆ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಚೀನಾದ ಗಡಿಗಳ ಸಂಬಂಧದ ಈ ಕಾನೂನು, ಪೂರ್ವ ಲಡಾಖ್‌ನಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಬೀಜಿಂಗ್ ಮತ್ತು ನವದೆಹಲಿ ಸುದೀರ್ಘ ಚರ್ಚೆಯಲ್ಲಿ ತೊಡಗಿರುವ ಸಮಯದಲ್ಲಿ ಬಂದಿದೆ. ವೀಕ್ಷಕರ ಪ್ರಕಾರ, ಈ ಹೊಸ ಕಾನೂನು ಚೀನಾ ತನ್ನ ಹಠವನ್ನೇ ಸಾಧಿಸುವ ಸೂಚಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಬಹುದಾದ ಈ ಕಾನೂನನ್ನು ಮುಂದಿಟ್ಟುಕೊಂಡು ಚೀನಾ ಕ್ರಮ ಕೈಗೊಳ್ಳಲಾರದು ಎಂದು ನಾವು ನಿರೀಕ್ಷಿಸುತ್ತೇವೆ ಎಂದೂ ಅವರು ಹೇಳಿದ್ದಾರೆ.

Related Articles

Leave a Reply

Your email address will not be published.

Back to top button