Breaking News

ನಾನು ಸಿದ್ದರಾಮಯ್ಯನವರ ಹಂಗಿನಲ್ಲಿಲ್ಲ; ಕುಮಾರಸ್ವಾಮಿ ವಾಗ್ದಾಳಿ

ರಾಮನಗರ: ನಮ್ಮ ಕುಟುಂಬದ 50 ವರ್ಷದ ರಾಜಕಾರಣದಲ್ಲಿ ತುಂಬಾ ಜನರನ್ನು ನೋಡಿದ್ದೇನೆ. ನಾನು ರಾಜಕಾರಣದಲ್ಲಿ ಎಂದೂ ಸಿದ್ದರಾಮಯ್ಯ ಅವರ ಹಂಗಿನಲ್ಲಿ ಬಂದಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ತೋಟದ ಮನೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಸಾತನೂರಿನಲ್ಲಿ ಚುನಾವಣೆ ನಿಂತಾಗ ನಾನೇ ನೇತೃತ್ವ ವಹಿಸಿಕೊಂಡಿದ್ದನು. ಜನತಾ ಪಕ್ಷದಲ್ಲಿ ಇದ್ದಾಗ ನಾನು ಅನೇಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಸಿದ್ದರಾಮಯ್ಯ ಅವರು ಜಾತ್ಯಾತೀತ ಜನತಾದಳ ಅಧ್ಯಕ್ಷರಾಗಿದ್ದರು. 1999ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಾಗ. ನಮ್ಮ ಅನುಗ್ರಹ ಮನೆಗೆ ಬಂದು ಕಣ್ಣೀರು ಇಟ್ಟಿದ್ದರು.

ರಾಜಕಾರಣ ಬಿಟ್ಟು ಕರಿ ಕೋಟ್ ಹಾಕಿಕೊಳ್ತೇನೆ ಅಂದಿದ್ರು. ಆಗ ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದರು. ಯಾರೋ ಕಾರ್ಯಕರ್ತರು ಜನ ಸೇರಿಸ್ತಾರೆ ಇವರೂ ಹೋಗಿ ಭಾಷಣ ಮಾಡ್ತಾರೆ. ಯಾವ ಜೆಡಿಎಸ್ ಪಕ್ಷದಿಂದ ಉಪಮುಖ್ಯಮಂತ್ರಿ ಆಗಿದ್ರೋ. ಅವತ್ತೆ ನೀವು ಜೆಡಿಎಸ್ ಮುಗಿಸಲು ಮುಂದಾಗಿದ್ರಿ ಎಂದು ಸಿದ್ದರಾಮಯ್ಯ ವಿರುದ್ದ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಮುಗಿಸಲು ಪ್ಲಾನ್ ಮಾಡಿದ ಸಂದರ್ಭದಲ್ಲ ನಿಮ್ಮನ್ನ ಪಕ್ಷದಿಂದ ಹೊರಹಾಕಿದ್ವಿ. ಅಂದು‌ 58 ಜನ ಶಾಸಕರು ಆಯ್ಕೆ ಆಗಿದ್ದರು. ಕಾಂಗ್ರೆಸ್ ಹೆಸರಿನಲ್ಲಿ ಅಹಿಂದ ಹೋರಾಟ ಮಾಡ್ತೀರಾ. ಜಾತಿಗಣತಿ ವಿಚಾರದಲ್ಲಿ ನನ್ನನ್ನು ಡಬಲ್ ಗೇಮ್ ಅಂತೀರಾ. ಕಾಂಗ್ರೆಸ್ ನವರು ಲೆಕ್ಕಾಚಾರ ಮಾಡಿಲ್ಲ ಅಂದ್ರೆ ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಇಡೋದೇ ಇದೇ ಸಿದ್ದರಾಮಯ್ಯ ಎಂದರು.

ಇನ್ನು ಮೈತ್ರಿ ಸರ್ಕಾರ ರಚನೆ ಆದ ನಂತರ. ನಾನು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಅಧಿಕಾರ ನಡೆಸ್ತಿದ್ದೆ ಅಂದಿದ್ದೀರಾ. ನಾನು ಅಲ್ಲಿ ಕೂತ್ಕೊಂಡು ರೈತರ ಸಾಲ ಮನ್ನಾ ವಿಚಾರ ಚರ್ಚೆ ಮಾಡ್ತಿದ್ದೆ.‌ ಮಾತಿನ ಮೇಲೆ ನಿಗಾ ಇರಬೇಕು ಎಂದು ಮತ್ತೊಮ್ಮೆ ಸಿದ್ದರಾಮಯ್ಯ ವಿರುದ್ದ ವಾಗ್ಧಾಳಿ ನಡೆಸಿದರು.

ಇನ್ನು ನಿಮ್ಮ ಶಾಸಕರ ವಿಚಾರಲ್ಲಿ ನಾನು ಯಾವ ರೀತಿ ನೋಡ್ಕೊಂಡು ಇದ್ದೀನಿ ಅಂತಾ ನನಗೆ ಗೊತ್ತು. ಸರ್ಕಾರ ಪತನ ವೇಳೆ ನಾನು ಅಮೆರಿಕಾ ಪ್ರವಾಸಸಲ್ಲಿ ಇದ್ದೆ. ಮೈತ್ರಿ ಸರ್ಕಾರ ನಡೆಸಲು ನನಗೂ ಕೂಡ ಇಷ್ಟ ಇರಲಿಲ್ಲ. ಧರ್ಮಸ್ಥಳದಲ್ಲಿ ಕೂತ್ಕೊಂಡು ಸರ್ಕಾರ ತೆಗೆಯೋಕೆ ಪ್ಲಾನ್ ಮಾಡಿದ್ದು ಯಾರು ಸ್ವಾಮಿ…? ನೀವೆಲ್ಲಾ ಮಾಡಿದ ಹುನ್ನಾರಕ್ಕೆ ಸರ್ಕಾರ ಪತನವಾಯಿತು.ಎಂದು ಸಿದ್ದರಾಮಯ್ಯ ವಿರುದ್ದ ವಾಗ್ಧಾಳಿ ನಡೆಸಿದರು.

Related Articles

Leave a Reply

Your email address will not be published.

Back to top button