Breaking NewsLatest
ಯುಪಿ ಹಿಂಸಾಚಾರ; ಮೃತ ನಾಲ್ವರು ರೈತರ ಕುಟುಂಬಗಳಿಗೆ ತಲಾ 45 ಲಕ್ಷ ಪರಿಹಾರ ಘೋಷಣೆ
ಲಕ್ನೋ: ಲಖಿಪುರಂ ಖೇರಿ ಹಿಂಸಾಚಾರಕ್ಕೆ ಬಲಿಯಾದ ನಾಲ್ವರು ರೈತರ ಕುಟುಂಬಗಳಿಗೆ ತಲಾ 45 ಲಕ್ಷ ಪರಿಹಾರವನ್ನು ಉತ್ತರ ಪ್ರದೇಶ ಸರ್ಕಾರ ಘೊಷಿಸಿದೆ.
ರೈತ ನಾಯಕ ರಾಕೇಶ್ ಟಿಕಾಯತ್ ಸ್ಥಳಿಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ನಡೆದ ಒಪ್ಪಂದದಂತೆ ಸರ್ಕಾರ ಈ ಪರಿಹಾರ ಘೊಷಣೆ ಮಾಡಿದೆ.
ಹಿಂಸಾಚಾರ ಘಟನೆ ಕುರಿತು ಹೈಕೋರ್ಟ್ನ ನಿವೃತ್ತ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿಯೂ ಸರ್ಕಾರ ಹೇಳಿದೆ.