Breaking NewsLatestಸಿನಿಮಾ
ಸಂಜೆ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ; ಪುತ್ರಿ ಬಂದ ಬಳಿಕ ಅಂತಿಮ ವಿಧಿ ವಿಧಾನ
ಬೆಂಗಳೂರು: ನಿನ್ನೆ ನಿಧನರಾದ ನಟ ಪುನೀತ್ ರಾಜ್ಕುಮಾರ್ ಅಂತ್ಯಕ್ರಿಯೆ ಇಂದೇ ಸಂಜೆ ನಡೆಯಲಿದೆ.
ಅಂತಿಮ ದರ್ಶನಕ್ಕಾಗಿ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗಿರುವ ಪುನೀತ್ ಪಾರ್ಥಿವ ಶರೀರದ ಮೆರವಣಿಗೆ ಅಪರಾಹ್ನ 3ರ ವೇಳೆಗೆ ಆರಂಭವಾಗಲಿದೆ. ಮೆರವಣಿಗೆ ಬಳಿಕ ಸಂಜೆ 5.30ರ ಹೊತ್ತಿಗೆ ಮತ್ತೆ ಕಂಠೀರವ ಸ್ಟೇಡಿಯಂಗೇ ಕರೆತರಲಾಗುವುದು.
ನ್ಯೂಯಾರ್ಕ್ನಲ್ಲಿರುವ ಪುತ್ರಿ ದ್ರಿತಿ ದೆಹಲಿಗೆ ಆಗಮಿಸುತ್ತಿದ್ದು. ದೆಹಲಿಯಿಂದ ಸಂಜೆಯ ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಕಂಠೀರವ ಕ್ರೀಡಾಂಗಣಕ್ಕೇ ಆಗಮಿಸಲಿದ್ದಾರೆ. ಅವರು ಬಂದ ಬಳಿಕ ಅಂತಿಮ ವಿಧಿ ವಿಧಾನ ನಡೆಯಲಿದೆ ಎಮದು ತಿಳಿದುಬಂದಿದೆ.