Breaking NewsLatestಸಿನಿಮಾ

ಓದಲು ಹೆಮ್ಮೆಯಿಂದ ಕಳಿಸಿಕೊಟ್ಟಿದ್ದ ಪಪ್ಪ ಈಗಿಲ್ಲ; ಪುನೀತ್ ಪಾರ್ಥಿವ ಶರೀರದ ಮುಂದೆ ಮಗಳು ಧೃತಿ ಕಣ್ಣೀರು

ಬೆಂಗಳೂರು: ಅಗಲಿದ ನಟ ಪುನೀತ್ ರಾಜ್​ಕುಮಾರ್ ಪುತ್ರಿ ಧೃತಿ ತಂದೆಯ ಅಂತಿಮ ದರ್ಶನ ಪಡೆದರು.

ತಂದೆಯ ಪಾರ್ಥಿವ ಶರೀರ ನೋಡುತ್ತಿದ್ದಂತೆ ದುಃಖ ತಡೆಯಲಾರದೆ ಭಾವುಕರಾದ ಧೃತಿ ಕಣ್ಣೀರು ಹಾಕಿದರು. ಅಪ್ಪನ ತಲೆ ಮುಟ್ಟಿ ಮತ್ತೆ ಮತ್ತೆ ನೇವರಿಸಿ ಕೊನೆಯ ಬಾರಿಗೆಂಬಂತೆ ಕಣ್ತುಂಬಿಕೊಂಡರು. ತಾಯಿಯನ್ನು ತಬ್ಬಿಕೊಂಡು ಅತ್ತರು. ಈ ಸಂದರ್ಭದಲ್ಲಿ ಆಕೆಯ ಜೊತೆಗೆ ತಂಗಿ ಹಾಗೂ ದೊಡ್ಡ್ಪ ಶಿವರಾಜ್​ಕುಮಾರ್ ಹಾಗೂ ಕುಟುಂಬದ ಇತರರು ಇದ್ದರು.

ತಂದೆ ನಿಧನರಾದ ಸುದ್ದಿ ಗೊತ್ತಾಗುತ್ತಿದ್ದಂತೆ ನ್ಯೂಯಾರ್ಕ್​ನಿಂದ ಹೊರಟು ಇಂದು ಮಧ್ಯಾಹ್ನ ನವದೆಹಲಿ ತಲುಪಿದ್ದ ಧೃತಿ, ಅಲ್ಲಿಂದ 4.15ರ ಹೊತ್ತಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಅವರು ಅಲ್ಲಿಂದ ಬರುವುದು ವಿಳಂಬವಾಗದಂತೆ ಅವರನ್ನು ಪೊಲೀಸ್ ಎಸ್ಕಾರ್ಟ್​ನಲ್ಲಿ ಕರೆದುಕೊಂಡು ಬರಲಾಯಿತು. ಏರ್​ಪೋರ್ಟ್​ನಿಂದ ನೇರವಾಗಿ ಸದಾಶಿವನಗರ ಮನೆಗೆ ಬಂದ ಧೃತಿ, ಬಳಿಕ ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದು ತಂದೆಯ ಅಂತಿಮ ದರ್ಶನ ಪಡೆದರು.

ಕೆಲವೇ ತಿಂಗಳುಗಳ ಹಿಂದೆ, ಸ್ಕಾಲರ್​ಶಿಪ್ ಪಡೆದು ನ್ಯೂಯಾರ್ಕ್​ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಗಳು ಸಿದ್ಧವಾದಾಗ ಹೆಮ್ಮೆಯಿಂದ ಪುನೀತ್ ಮಗಳನ್ನು ಕಳಿಸಿಕೊಟ್ಟಿದ್ದರು. ಅಂದು ಸಂಭ್ರಮಿಸಿದ್ದ ಧೃತಿಯ ಪ್ರೀತಿಯ ಪಪ್ಪಾ ಈಗಿಲ್ಲ.

Related Articles

Leave a Reply

Your email address will not be published. Required fields are marked *

Back to top button