Breaking NewsLatestಸಿನಿಮಾ
ದೆಹಲಿಗೆ ಬಂದಿಳಿದ ಪುನೀತ್ ಪುತ್ರಿ ದ್ರಿತಿ; ಬೆಂಗಳೂರಿನತ್ತ ಪ್ರಯಾಣ
ಬೆಂಗಳೂರು: ಅಗಲಿದ ನಟ ಪುನೀತ್ ಪುತ್ರಿ ದ್ರಿತಿ ನ್ಯೂಯಾರ್ಕ್ನಿಂದ ದೆಹಲಿಗೆ ಬಂದಳಿದಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿ ನವದೆಹಲಿಗೆ ಆಗಮಿಸಿರುವ ಅವರು ಮಧ್ಯಾಹ್ನ 1.30ರ ವಿಮಾನದಲ್ಲಿ ಬೆಂಗಳೂರಿಗೆ ಬರಲಿದ್ದಾರೆ.
ಸಂಜೆ 4.30ರ ಸುಮಾರಿಗೆ ಅವರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ನೇರವಾಗಿ ಅವರು ಕಂಠೀರವ ಸ್ಟುಡಿಯೋಗೆ ಆಗಮಿಸಿ, ತಂದೆಗೆ ಅಂತಿಮ ನಮನ ಸಲ್ಲಿಸುವರು.
ದ್ರಿತಿ ಆಗಮನದ ಬಳಿಕ ಪುನೀತ್ ಅಂತ್ಯ ಸಂಸ್ಕಾರಕ್ಕೆ ವಿಧಿ ವಿಧಾನಗಳು ನಡೆಯಲಿವೆ.