Breaking NewsLatest

ತಮಿಳುನಾಡು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನತ್ತ ಡಿಎಂಕೆ

ಚೆನ್ನೈ: ತಮಿಳುನಾಡಿನಲ್ಲಿ ಆಡಳಿತಾತ್ಮಕ ಅನುಕೂಲತೆ ಮತ್ತು ಜನತೆಯ ಬೇಡಿಕೆ ಕಾರಣಕ್ಕೆ ರಚಿಸಲಾಗಿದ್ದ 9 ಹೊಸ ಜಿಲ್ಲೆಗಳಲ್ಲಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಡಿಎಂಕೆ ಭರ್ಜರಿ ಜಯ ಗಳಿಸುವ ಹಾದಿಯಲ್ಲಿದೆ.

153 ಪಂಚಾಯತ್ ವಾರ್ಡ್​ಗಳ ಪೈಕಿ ಡಿಎಂಕೆ 45ರಲ್ಲಿ ಗೆಲುವು ಸಾಧಿಸಿದ್ದು, ಉಳಿದ ಬಹುತೇಕ ವಾರ್ಡ್​ಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 1421 ಪಂಚಾಯತ್ ಯೂನಿಯನ್ ವಾರ್ಡ್​ಗಳಲ್ಲಿ 645 ಸ್ಥಾನಗಳನ್ನು ಈಗಾಗಲೇ ಗೆದ್ದಿದ್ದು, ಉಳಿದವುಗಳಲ್ಲೂ ಮುನ್ನಡೆ ಸಾಧಿಸಿದೆ.

ಮಂಗಳವಾರ ಬೆಳಗ್ಗಿನಿಂದ ಮತ ಎಣಿಕೆ ಕಾರ್ಯ ನಡೆದಿದ್ದು, ಇಂದು ಸಂಜೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಮೇ ತಿಂಗಳಲ್ಲಿ ಡಿಎಂಕೆಯ ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಎಐಎಡಿಎಂಕೆ-ಬಿಜೆಪಿ ಮೈತ್ರಿ ವಿರುದ್ಧ ಪ್ರಚಂಡ ಗೆಲುವಿನ ಸುಳಿವು ಸಿಗುತ್ತಿದ್ದಂತೆಯೇ, ಮಯತದಾರರಿಗೆ ಸ್ಟಾಲಿನ್ ಧನ್ಯವಾದ ಅರ್ಪಿಸಿದ್ದು, ಇದು ಐದು ತಿಂಗಳ ಆಡಳಿತಕ್ಕೆ ಜನ ಮನ್ನಣೆ ಕೊಟ್ಟಿರುವುದರ ಪರಿಣಾಮ ಎಂದಿದ್ದಾರೆ.

ನಟ ಕಮಲ್ ಹಾಸನ್ ಅವರ ಎಂಎನ್​ಎಂ ಸೇರಿದಂತೆ ಪ್ರತಿಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ತೆಂಕಸಿ ಜಿಲ್ಲೆಯಿಂದ 22 ವರ್ಷದ ಸಾರುಲತಾ ಗೆಲುವು ಸಾಧಿಸಿದ್ದು, ಅತಿ ಕಿರಿಯ ಪಂಚಾಯತ್ ಅಧ್ಯಕ್ಷೆಯಾಗಿದ್ದಾರೆ. ಇದೇ ವೇಳೆ ಕೊಯಮತ್ತೂರಿನಲ್ಲಿ ಸ್ಪರ್ಧಿಸಿದ್ದ ಓರ್ವ ಬಿಜೆಪಿ ನಾಯಕ ಒಂದು ಮತವನ್ನಷ್ಟೇ ಗಳಿಸಿದ್ದು, ಭಾರೀ ಅಪಹಾಸ್ಯಕ್ಕೆ ಬಿಜೆಪಿ ಗುರಿಯಾಗಿದೆ.

ಗ್ರಾಮೀನ ಸ್ತಳೀಯ ಸಂಸ್ಥೆ ಗೆಲುವು, ಈ ವರ್ಷಾಂತ್ಯದೊಳಗೆ ನಡೆಯಬೇಕಿರುವ ಪಟ್ಟಣ ಪಂಚಾಯತ್ ಚುನಾವಣೆಗೂ ದಿಕ್ಸೂಚಿಯಾಗಲಿದೆ ಎನ್ನಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button