ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ: ಧೃವನಾರಾಯಣ್
ಮೈಸೂರು: ಬಿಜೆಪಿಯವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಪ ಪ್ರಚಾರ ಮಾಡಿ ದಲಿತರ ದಿಕ್ಕು ತಪ್ಪಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯರವರು ಸಿಎಂ ಆಗಿದ್ದಾಗ ದಲಿತರಿಗೆ ಕೊಟ್ಟ ಕಾರ್ಯಕ್ರಮ ಸ್ಥಾನಮಾನ ಇತಿಹಾಸ ಪುಟದಲ್ಲಿ ಇಡಬಹುದು. ಅಂತವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಅಂಬೇಡ್ಕರ್ ಹೆಸರನ್ನು ದುರುಪಯೋಗ ಬಿಜೆಪಿಯವರು ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ವಿರುದ್ದ ಆರೋಪ ಮಾಡುತ್ತಿರುವವರು ಆರ್.ಎಸ್.ಎಸ್ ನವರ ಗುಲಾಮಗಿರಿ ಮಾಡುತ್ತಿದ್ದಾರೆ. ದಲಿತರ ಮೇಲೆ ಕಾಳಜಿ ಇದ್ದರೆ ದಲಿತರ ಪರವಾದ ಕಾನೂನು ತನ್ನಿ.
ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಮಾತನಾಡಿದ್ರು. ಆದ್ರೆ ಚುನಾವಣೆ ಮುಗಿದ ನಂತರ ಈ ವಿಚಾರವಾಗಿ ಪ್ರತಿಭಟನೆ ಮಾಡಿದ್ದಾರೆ. ಇದರ ಅರ್ಥ ಇವರು ದಲಿತರನ್ನ ಎತ್ತಿಕಟ್ಟುವ ಹುನ್ನಾರ ಇದೆ ಎಂಬುದು ಸ್ಪಷ್ಟವಾಗಿದೆ ಎಸ್ ಎಂದರು.
ಸಿದ್ದರಾಮಯ್ಯ ದಲಿತರ ವಿರುದ್ಧ ಮಾತನಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಸಿಂದಗಿ ಚುನಾವಣೆಯಲ್ಲಿ ಮಾದಿಗ ಜನಾಂಗದ ಸಮ್ಮೇಳನದಲ್ಲಿ ಕೆಲವರು ಅವರ ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈ ಹೇಳಿಕೆಯನ್ನು ತಿರುಚಿ ಬಿಜೆಪಿಯವರು ದಲಿತರ ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ. ಅವರು ದುರುದ್ದೇಶದಿಂದ ಈ ರೀತಿ ಹೇಳಿಕೆಯನ್ನು ತಿರುಚಿದ್ದಾರೆ ಎಂದರು.
ಸಿದ್ದರಾಮಯ್ಯ ಮಾಸ್ ಲೀಡರ್, ಜನಪರ ಕಾಳಜಿ ಇರುವ ನಾಯಕ. ಹೀಗಾಗಿ ಅವರ ವಿರುದ್ಧ ಹುನ್ನಾರ ಮಾಡಲಾಗುತ್ತಿದೆ ಎಂದು ದೂರಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ದಲಿತರಿಗೆ ಕೊಟ್ಟ ಕಾರ್ಯಕ್ರಮಗಳು, ಯೋಜನೆಗಳು ಹಾಗೂ ಸ್ಥಾನಮಾನವನ್ನು ಇತಿಹಾಸದ ಪುಟದಲ್ಲಿ ದಾಖಲಿಸಿ ಇಡಬಹುದು. ಅಂತವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಅಂಬೇಡ್ಕರ್ ಹೆಸರನ್ನು ಬಿಜೆಪಿಯವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದಲಿತರ ಮೇಲೆ ಕಾಳಜಿ ಇದ್ದರೆ ದಲಿತರ ಪರವಾದ ಕಾನೂನು ಜಾರಿಗೆ ತನ್ನಿ ಅಂತಾ ಚುನಾವಣೆ ಪ್ರಚಾರದ ವೇಳೆ ಸಿದ್ದರಾಮಯ್ಯ ಮಾತನಾಡಿದ್ದರು. ಆದರೆ ಚುನಾವಣೆ ಮುಗಿದ ನಂತರ ಕೆಲವರು ಈ ವಿಚಾರವಾಗಿ ಪ್ರತಿಭಟನೆ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಯವರು ದಲಿತರನ್ನ ಎತ್ತಿ ಕಟ್ಟುವ ಹುನ್ನಾರ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು.
ಜನಪರ ಕಾಳಜಿ ಇರುವ ನಾಯಕ ಚುನಾವಣೆ ಸೋತ ನಂತರ ಈ ವಿಚಾರವನ್ನ ತೆಗೆದಿದ್ದಾರೆ. ಬಿಟ್ ಕಾಯಿನ್ ವಿಚಾರ ಮರೆಮಾಚಿದ್ದಾರೆ. ಇದನ್ನ ಹೊರತೆಗೆದ್ರೆ ದೊಡ್ಡ ನಾಯಕರ ಹೆಸರು ಹೊರಬರುತ್ತೆ ಎಂದು ಮಾಜಿ ಸಂಸದ ಧೃವನಾರಾಯಣ್ ಆರೋಪಿಸಿದರು.