Breaking NewsLatest

IPL 2021 winner: ನಾಲ್ಕನೇ ಬಾರಿಗೆ ಚೆನ್ನೈ ಐಪಿಎಲ್ ಚಾಂಪಿಯನ್

ದುಬೈ : ಕೋಲ್ಕೊತಾ ನೈಟ್ ರೈಡರ್ಸ್​​​ ತಂಡವನ್ನು 27 ರನ್ ಗಳ ಅಂತರದಲ್ಲಿ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದೆ.

ಫಾಫ್ ಡು ಪ್ಲೆಸಿಸ್ (86) ಮತ್ತು ಮೊಯಿನ್ ಅಲಿ (32*) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 192 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆಂತ್ತಿದ ಕೆಕೆಆರ್ ಉತ್ತಮ ಆರಂಭವನ್ನೇ ಕಂಡಿತ್ತು. ಶುಭ್ಮನ್ ಗಿಲ್ (51) ಮತ್ತು ವೆಂಕಟೇಶ್ ಅಯ್ಯರ್ (50) ಉತ್ತಮ ಆರಂಭ ಕಲ್ಪಿಸಿದ್ದರು. ಆದರೆ ಈ ಇಬ್ಬರು ಬ್ಯಾಟ್ಸ್ಮನ್ ನಿರ್ಗಮಿಸಿದ ನಂತರ ಕೆಕೆಆರ್ ಸೋಲಿನ ಅಂಚಿಗೆ ಸಿಲುಕಿತು.

ಶಾರ್ದೂಲ್ ಠಾಕೂರ್ (38ಕ್ಕೆ 3), ಜೋಶ್ ಹೆಜಲ್ವುಡ್ (29ಕ್ಕೆ 2) ಮತ್ತು ರವೀಂದ್ರ ಜಡೇಜಾ (37ಕ್ಕೆ 2) ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಫಾಫ್ ಡು ಪ್ಲೆಸಿಸ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಒಟ್ಟು 635 ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಉದಯೋನ್ಮುಖ ಆಟಗಾರ ಮತ್ತು ಆರೆಂಜ್ ಕ್ಯಾಪ್ ಪ್ರಶಸ್ತಿ ಗೆದ್ದರು.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಫೇರ್ ಪ್ಲೇ ಪ್ರಶಸ್ತಿ, ಪಂಜಾಬ್ ಕಿಂಗ್ಸ್ ತಂಡದ ರವಿ ಬಿಷ್ಣೋಯ್ ಅವರಿಗೆ ಉತ್ತಮ ಕ್ಯಾಚ್ ಪ್ರಶಸ್ತಿ. 32 ವಿಕೆಟ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್ ಅವರಿಗೆ ಪರ್ಪಲ್ ಕ್ಯಾಪ್ ಮತ್ತು ಗೇಮ್ ಚೇಂಜರ್ ಗೌರವ ನೀಡಲಾಯಿತು.

Related Articles

Leave a Reply

Your email address will not be published.

Back to top button