Breaking NewsLatest

ತುಕ್ಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ: ಸಿಟಿ ರವಿ

ಚಿಕ್ಕಮಗಳೂರು: ತುಕ್ಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ, ಚುನಾವಣೆಯಲ್ಲಿ ಸೋತರು. ಇಂತವರು ಬಹಳ ಮಾತನಾಡಿ ಮಾತನಾಡಿ ಮಣ್ಣಾಗಿದ್ದಾರೆ ಎಂದು ಸಿ ಟಿ ರವಿ ಹೇಳಿದರು.

ಬಿಜೆಪಿಯನ್ನು ತುಕ್ಡೆ-ತುಕ್ಡೆ ಮಾಡುತ್ತೇವೆಂದು ಕನ್ಹಯ್ಯ ಕುಮಾರ್ ಹೇಳಿರುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಇವರ ತಾತ-ಮುತ್ತಾತರು ಈ ರೀತಿ ಹೇಳುತ್ತಲೇ ಕಳೆದು ಹೋಗಿದ್ದಾರೆ. ಅವರ ಸಮಾಧಿ ಮಣ್ಣಿನ ಮೇಲೆ ಸಂಘ, ಬಿಜೆಪಿ ಬಲವಾಗಿದೆ ಎಂದಿದ್ದಾರೆ.

ಕನ್ಹಯ್ಯ ಕುಮಾರ್ ತುಕ್ಡೆ ಗ್ಯಾಂಗಿನ ನಾಯಕ. ಹಿಟ್ಟು ಹಳಸಿತ್ತು ಡ್ಯಾಶ್ ಕಾದಿತ್ತು ಅನ್ನೋ ಗಾದೆ ಮಾತಿದೆ. ಈಗ ಅದೇ ಪರಿಸ್ಥಿತಿ ಕಾಂಗ್ರೆಸ್ಸಿನದ್ದಾಗಿದೆ.ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷ ದೇಶಕ್ಕೇನು ಪ್ರಜಾಪ್ರಭುತ್ವ ದ ಪಾಠ ಹೇಳುತ್ತೇ? ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ. ಅಲ್ಲಿರೋದು ವಂಶ ಪಾರಂಪರ್ಯ ಎಂದು ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published.

Back to top button