Breaking NewsLatest

ಡಿಕೆಶಿ ವಿರುದ್ಧ ಕಾಂಗ್ರೆಸ್​ನಲ್ಲಿ ಸಂಚು ನಡೆದಿದೆ; ಸಿ ಟಿ ರವಿ ವ್ಯಂಗ್ಯ

ಚಿಕ್ಕಮಗಳೂರು : ಡಿ ಕೆ ಶಿವಕುಮಾರ್ ವಿರುದ್ಧ ಕಾಂಗ್ರೆಸ್ ನಲ್ಲಿ ಸಂಚು ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.

ಸಲೀಂ-ಉಗ್ರಪ್ಪ ಅವರು ಡಿ ಕೆ ಶಿವಕುಮಾರ್ ಬಗ್ಗೆ ಗುಟ್ಟಾಗಿ ಆಡಿದ್ದಾರೆನ್ನಲಾದ ಮಾತುಕತೆ ಹಿನ್ನೆಲೆಯಲ್ಲಿ ಸಿ ಟಿ ರವಿ ಈ ಹೇಳಿಕೆ ನೀಡಿದ್ದಾರೆ.

ಇನ್ನೊಂದು ಪಕ್ಷದ ಬಗ್ಗೆ ಸದಾಕಾಲ ಟೀಕಿಸುತ್ತಿದ್ದ ಉಗ್ರಪ್ಪನವರು ಮತ್ತು ಸಲೀಂ ಅಹ್ಮದ್ ಅವರು ಗುಟ್ಟನ್ನು ರಟ್ಟು ಮಾಡಿದ್ದಾರೆ. ಒಂದು ಗಾದೆ ಮಾತಿದೆ.. ʼಕಳ್ಳನ ಹೆಂಡತಿ ಯಾವತ್ತಿದ್ರೂ……..ʼ ಎಂಬಂತೆ ಕಾಂಗ್ರೆಸ್ ನಾಯಕನ ಬಗ್ಗೆ ಅವರೇ ಈ ಸಂದರ್ಭದಲ್ಲಿ ಗುಟ್ಟು ರಟ್ಟು ಮಾಡಿರುವುದರ ಹಿಂದೆ ಬಹುಶಃ ಪಿತೂರಿ ಇದೆ ಎಂದರು.

ತನಗೆ ಅಡ್ಡ ಇರೋರನ್ನೆಲ್ಲಾ ಹೇಗಾದರೂ ಮಾಡಿ ಬದಿಗೆ ಸರಿಸಬೇಕು ಎನ್ನುವಂತಹ ಸಂಚಿನಲ್ಲೇ ಹಿಂದೆ ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಂಡರು. ಯಾವ ಶಕ್ತಿ ಪರಮೇಶ್ವರ್ ಅವರು ಸಿಎಂ ಸ್ಥಾನಕ್ಕೆ ಅಡ್ಡಗಾಲಾಗುತ್ತಾರೆಂದು ಹೇಳಿ ಅವರನ್ನು ಸೋಲಿಸಿದೆಯೋ ಅದೇ ಶಕ್ತಿ ಇವತ್ತು ಗುಟ್ಟನ್ನು ರಟ್ಟು ಮಾಡುವ ಮೂಲಕ ಡಿಕೆಶಿ ನನಗೆ ಅಡ್ಡಗಾಲಾಗಿದ್ದಾರೆಂದು, ಅವರನ್ನು ಬದಿಗೆ ಸರಿಸಬೇಕು ಎನ್ನುವಂತಹ ಸಂಚು ಮಾಡಿರುವುದು ಸ್ಪಷ್ಟವಾಗುತ್ತದೆ ಎಂದರು.

ಉಗ್ರಪ್ಪ, ಸಲೀಂ ಅಹ್ಮದ್ ಅವರು ಅಷ್ಟು ದಡ್ಡರೆಂದು ನನಗೆ ಅನಿಸೋದಿಲ್ಲ. ಗುಟ್ಟು ರಟ್ಟಾಗಲಿ ಎಂದು ಬೇಕಂತಲೇ ನಟಿಸಿ ಮಾತನಾಡಿದ್ದಾರೆ. ಇದರ ಹಿಂದೆ ವಿಪಕ್ಷ ನಾಯಕರ ಬುದ್ಧಿವಂತ ಮೆದುಳು ಕೆಲಸ ಮಾಡಿದೆ. ಇನ್ನು ಕಾಂಗ್ರೆಸ್ಸೇ ಹೀಗಿದೆ. ತಿಪ್ಪೇ ಕೆದಕಿದಷ್ಟು ಹೊಲಸೇ ಹೊರಬರುತ್ತದೆ. ಬರೀ ಕೆದಕುವುದು ಡಿಕೆ ಶಿವಕುಮಾರ್ ಅವರದೇನು? ಕೆದಕಿದರೆ ಕಾಂಗ್ರೆಸ್ ಪೂರಾ ಹೊಲಸೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published.

Back to top button