Breaking NewsLatest
MS Dhoni: ಟಿ20ವಿಶ್ವಕಪ್ : ಧೋನಿಯಿಂದ ತಂಡಕ್ಕೆ ಉಚಿತ ಸಲಹೆ
ಮುಂಬಯಿ: ಮುಂಬರುವ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಮೆಂಟರ್ ಆಗಿ ಕಾರ್ಯನಿರ್ವಹಿಸಲಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅದಕ್ಕಾಗಿ ಬಿಸಿಸಿಐನಿಂದ ತಾನು ಯಾವುದೇ ರೀತಿಯ ಸಂಭಾವನೆ ಬಯಸುವುದಿಲ್ಲ ಎಂದಿದ್ದಾರೆ.
ಧೋನಿಯವರ ಈ ಉದಾರ ನಿಲುವಿಗೆ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ತಿಂಗಳ 17ರಿಂದ ಯುಎಇ ಮತ್ತು ಒಮನ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಭಾರತ 24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಲಿದೆ.
ಐಪಿಎಲ್ ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಆವೇಶ್ ಖಾನ್ ಅವರು ನೆಟ್ ಬೌಲರ್ ಆಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ.