Breaking NewsLatest
ಯೂರೋಪ್ನಲ್ಲಿ ವ್ಯಾಪಿಸುತ್ತಿರುವ ಕೋವಿಡ್; ಮತ್ತಷ್ಟು ಲಕ್ಷ ಸಾವುಗಳ ಬಗ್ಗೆ ಡಬ್ಲ್ಯುಎಚ್ಒ ಎಚ್ಚರಿಕೆ
ಕೋಪನ್ಹೇಗನ್: ಯೂರೋಪ್ನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಖ್ಯೆ, ಬರುವ ವರ್ಷದ ಆರಭದಲ್ಲೇ ಮತ್ತಷ್ಟು ಲಕ್ಷ ಸಾವುಗಳನ್ನು ನೋಡಬೇಕಾಗಿ ಬರಬಹುದೆಂದು ಗುರುವಾರ ಎಚ್ಚರಿಸಿದೆ.
ಯೂರೋಪ್ನ 53 ದೇಶಗಳಾದ್ಯಂತ ಕೋವಿಡ್ನ ಈಗಿನ ಅಲೆ ವ್ಯಾಪಿಸಿಕೊಳ್ಳುತ್ತಿದ್ದು, ಇದು ತೀವ್ರ ಆತಂಕದ ಸಂಗತಿಯಾಗಿದೆ ಎಂದು ಅದು ಹೇಳಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಯೂರೋಪ್ ನಿರ್ದೇಶಕ ಹನ್ಸ್ ಕ್ಲುಜ್, ಈಗಿನದೇ ಸ್ಥಿತಿ ಮುಂದುವರಿದಲ್ಲಿ ಮತ್ತೆ ಅರ್ಧ ಮಿಲಿಯನ್ನಷ್ಟು ಸಾವುಗಳು ಬರುವ ಫೆಬ್ರವರಿ ವೇಳೆಗೆ ಸಂಭವಿಸಲಿವೆ ಎಂದು, ಭಯಾನಕ ಭವಿಷ್ಯದ ಸುಳಿವು ಕೊಟ್ಟರು.
ಯುರೋಪಿಯನ್ ವಲಯವು 53 ದೇಶಗಳು ಮತ್ತು ಪ್ರಾಂತ್ಯಗಳನ್ನು ಮಾತ್ರವಲ್ಲದೆ, ಮಧ್ಯ ಏಷ್ಯಾದ ಹಲವಾರು ರಾಷ್ಟ್ರಗಳನ್ನು ಒಳಗೊಂಡಿದೆ.