Breaking NewsLatest

2-18 ವರ್ಷದವರಿಗೆ ಕೋವ್ಯಾಕ್ಸಿನ್; ಡಿಸಿಜಿಐಗೆ ಶಿಫಾರಸು

ನವದೆಹಲಿ: 2ರಿಂದ 18 ವರ್ಷ ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಪರಿಣಿತರ ಸಮಿತಿ ಶಿಫಾರಸು ಮಾಡಿದ್ದು, ಡಿಸಿಜಿಐ ಅಂತಿಮ ಅನುಮತಿ ನೀಡುವುದಷ್ಟೇ ಬಾಕಿಯಿದೆ.

ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮತಿ ನೀಡಿದಲ್ಲಿ, ಮಕ್ಕಳಿಗಾಗಿ ಬಳಸಲು ಲಭ್ಯವಾಗುವ ಎರಡನೇ ಲಸಿಕೆ ಇದಾಗಲಿದೆ. ಆಗಸ್ಟ್​ನಲ್ಲಿ ಜೈಡೂಸ್ ಕ್ಯಾಡಿಲಾಸ್​ನ ಮೂರು ಡೋಸ್ ಡಿಎನ್​ಎ ಲಸಿಕೆಯನ್ನು 12 ವರ್ಷ ಮೇಲ್ಪಟ್ಟವರ ಮೇಲೆ ಬಳಸಲು ಅನುಮತಿ ನೀಡಲಾಗಿತ್ತು.

ಕೋವ್ಯಾಕ್ಸಿನ್ ಉತ್ಪಾದಕ ಸಂಸ್ಥೆಯಾದ ಭಾರತ್ ಬಯೋಟೆಕ್, ಲಸಿಕೆಯ ಕ್ಲಿನಿಕಲ್ ಪ್ರಯೋಗ ಸಂಬಂಧಿತ ದತ್ತಾಂಶಗಳನ್ನು ಕಳೆದ ವಾರ ಡಿಸಿಜಿಐಗೆ ಸಲ್ಲಿಸಿತ್ತು.

ಈ ದತ್ತಾಂಶವನ್ನು ಬಹಿರಂಗಪಡಿಸಿಲ್ಲವಾದರೂ, ದೇಶಾದ್ಯಂತ ಸಾವಿರಕ್ಕೂ ಹೆಚ್ಚು ಮಕ್ಕಳ ಮೇಲೆ ಅದರ ಪ್ರಯೋಗ ನಡೆದಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button