Breaking NewsLatest

ಬಿಜೆಪಿಯವರು ಯಾವ ಮುಖ ಹೊತ್ತು ಮತ ಕೇಳಲು ಬಂದಿದ್ದಾರೆ?; ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಕೊಟ್ಟ ಮಾತನ್ನು ಈಡೇರಿಸದೇ ಬಿಜೆಪಿಯವರು ಯಾವ ಮುಖ ಹೊತ್ತು ಮತ ಕೇಳಲು ಬಂದಿದ್ದಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಈ ಸಂಬಂಧ ಟ್ಟಿಟ್ ಮಾಡಿರುವ ಪ್ರದೇಶ ಕಾಂಗ್ರೆಸ್, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಗೊಬ್ಬರ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಕಡಿಮೆ ಮಾಡಿವೆಯೇ? ಕೊರೋನ ವೇಳೆ ಹೇಳಿದಂತೆ ಸರ್ಕಾರ ಸಂಕಷ್ಟದಲ್ಲಿದ್ದ ರೈತರಿಗೆ ಪರಿಹಾರ ನೀಡಿದೆಯೇ? ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಕಲ್ಪಿಸಿದೆಯೇ? ಹಾಗಿದ್ದರೆ ಬಿಜೆಪಿಯವರು ಯಾವ ಮುಖ ಹೊತ್ತು ಮತ ಕೇಳಲು ಬಂದಿದ್ದಾರೆ ಎಂದಿದೆ.

ಇನ್ನೊಂದು ಟ್ವಿಟ್ ನಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಡಬಲ್ ಎಂಜಿನ್ ಸರ್ಕಾರ, ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಈಗ ಅನ್ನದಾತರ ಆದಾಯ ಡಬಲ್ ಆಗಿದೆಯೇ? ಕೊರೊನ ವೇಳೆ ಸರ್ಕಾರವಾಗಲಿ, ಬಿಜೆಪಿ ಶಾಸಕರು, ಸಚಿವರಾಗಲಿ ನಿಮ್ಮ ಸಹಾಯಕ್ಕೆ ಬಂದರೆ? ಸರ್ಕಾರಗಳೇ ಘೋಷಿಸಿದ ಪರಿಹಾರವನ್ನು ನಿಮ್ಮ ಖಾತೆಗೆ ಜಮೆ ಮಾಡಿದರೆ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Related Articles

Leave a Reply

Your email address will not be published. Required fields are marked *

Back to top button