Breaking NewsLatest

ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮದೇ ಗೆಲುವು: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಇಂದು ನಾನು ಹಾನಗಲ್‌ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಎಡರು ಕ್ಷೇತ್ರ ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಮಾಡುತ್ತೇನೆ. ಹಾನಗಲ್ ಮತ್ತು ಸಿಂಧಗಿ ಉಪಕದನದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನ ಪಡೆದು ಅಭುತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಹಾನಗಲ್ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯದಲ್ಲಿ ಹೆಚ್ಚು ಒತ್ತು ನೀಡಲು ನಿರ್ಧಾರ ಮಾಡಿದ್ದೇನೆ. ಹಾನಗಲ್, ಸಿಂಧಗಿಯಲ್ಲಿ ಹೆಚ್ಚಿನ ಸಮಯ ಕೊಟ್ಟು ಪ್ರಚಾರ ಕಾರ್ಯ ಮಾಡಲಾಗುವುದು. ಸಂಪೂರ್ಣ ವಿಶ್ವಾಸ ಇದೆ, ಎರಡು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿಯ ಸಕ್ಕರೆ ಕಾರ್ಖಾನೆಯನ್ನ ಬಿಜೆಪಿ ಶಾಸಕರು ನುಂಗಿ ನೀರು ಕುಡಿದಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿ, ಸಕ್ಕರೆ ಕಾರ್ಖಾನೆಗೆ ತನ್ನದೇ ಆದ ಇತಿಹಾಸ ಇದೆ. ಕಾರ್ಖಾನೆ ಮುಚ್ಚೋದಕ್ಕೆ ಕಾಂಗ್ರೆಸ್ ಕೊಡುಗೆ ಹೆಚ್ಚಿದೆ. ಸಮೀಕ್ಷೆ ಮಾಡಿ ಕಬ್ಬು ಅರಗಿಸುವ ಕಡೆ ಗಮನ ಹರಿಸಿದ್ದರೆ ಅದೂ ನಮ್ಮ ಬಿಜೆಪಿ ಪಕ್ಷ ಮಾತ್ರ. ಅದರ ಎಲ್ಲಾ ವಿವರವನ್ನು ಅಲ್ಲೇ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದರು‌.

ಇದೆ ವೇಳೆ ಹಾನಗಲ್ ಕ್ಷೇತ್ರಕ್ಕೆ ಹಾನಗಲ್ ಅಳಿಯ ಸಿಎಂ ಬೊಮ್ಮಾಯಿ ಕೊಡುಗೆ ಏನೂ..? ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ 2400 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ಬೊಮ್ಮಾಯಿ ಏನೂ ಬಿಡುಗಡೆ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲಿದೆ 2400 ಕೋಟಿ, ನೀವೆ ವಿವರ ಕೇಳಬೇಕಿತ್ತು ಅವರಿಗೆ ಎಂದು ಪ್ರಶ್ನೆ ಮಾಡಿದರು. ಎಷ್ಟು ಹಣ ಎಲ್ಲಿ ಕೊಟ್ಟಿದ್ದಾರೆ? ಅದರ ಬಗ್ಗೆ ಮೊದಲು ಅವರು ಹೇಳಲಿ ಆಮೇಲೆ ನಾನು ಏನೂ ಕೊಟ್ಟಿದ್ದೇನೆ ಅದರ ಬಗ್ಗೆ ಖಂಡಿತ ಹೇಳತ್ತೇನೆ ತಿರುಗೆಟು ನೀಡಿದರು. ‌

Related Articles

Leave a Reply

Your email address will not be published.

Back to top button