Breaking NewsLatest

ಕರ್ನಾಟಕವಲ್ಲದೆ ಇನ್ನೂ 12 ರಾಜ್ಯಗಳಲ್ಲಿ ಉಪಚುನಾವಣೆ ಮತ ಎಣಿಕೆ; ಬಿಜೆಪಿ, ಕಾಂಗ್ರೆಸ್ ಪೈಪೋಟಿ

ನವದೆಹಲಿ: ಕರ್ನಾಟಕವಲ್ಲದೆ ಇನ್ನೂ 12 ರಾಜ್ಯಗಳಲ್ಲಿ ನಡೆದಿರುವ ಉಪಚುನಾವಣೆ ಮತ ಎಣಿಕೆ ನಡೆದಿದ್ದು, ಕೆಲವು ರಾಜ್ಯಗಳಲ್ಲಿ ಬಿಜೆಪಿ, ಮತ್ತೆ ಕೆಲವೆಡೆ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.

3 ಲೋಕಸಭಾ ಕ್ಷೇತ್ರಗಳು ಹಾಗೂ 27 ವಿಧಾನಸಭಾ ಕ್ಷೇತ್ರಗಳಿಗೆ (ಕರ್ನಾಟಕ ಹೊರತುಪಡಿಸಿ) ನಡೆದ ಉಪಚುನಾವಣೆ ಮತ ಎಣಿಕೆ ನಡೆಯುತ್ತಿದೆ.

27 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಪ್ರಾಬಲ್ಯ ಸಾಧಿಸಿರುವ ಬಿಜೆಪಿ, 7 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಇನ್ನು ಕಾಂಗ್ರೆಸ್ 9 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದು, 3ರಲ್ಲಿ ಮುನ್ನಡೆಯಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

Related Articles

Leave a Reply

Your email address will not be published.

Back to top button