Breaking NewsLatest

ಅಫ್ಘಾನ್ ಮಸೀದಿಯಲ್ಲಿ ಬಾಂಬ್ ಸ್ಫೋಟ; ನೂರಕ್ಕೂ ಹೆಚ್ಚು ಸಾವು ಶಂಕೆ

ಕುಂಡುಝ್: ಅಫ್ಘಾನಿನ ಕುಂಡುಝ್ ಪ್ರಾಂತದ ಮಸೀದಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.

ಶಿಯಾ ಪಂಗಡಕ್ಕೆ ಸೇರಿದ ಗೊಝಾರೆ ಸಯ್ಯದ್ ಅಬಾದ್ ಎಂಬ ಮಸೀದಿಯಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿ, ಪೈಶಾಚಿಕತೆ ಮೆರೆದಿದ್ದಾರೆ. ಶುಕ್ರವಾರದ ಸಾಮೂಹಿಕ ನಮಾಝ್ ವೇಳೆಯಲ್ಲೇ ಭೀಭತ್ಸ ಕೃತ್ಯ ನಡೆದಿದೆ ಎನ್ನಲಾಗಿದೆ.

ಭಯಾನಕ ಸ್ಫೋಟದಿಂದ ಛಿದ್ರವಾಗಿರುವ ಮಸೀದಿಯೊಳಗೆ ಮೃತರ ಕುಟುಂಬಸ್ಥರು ಮೃತದೇಹಗಳನ್ನು ಹುಡುಕಾಡುತ್ತಿರುವುದು, ತುರ್ತು ವಾಹನಗಳಲ್ಲಿ ಸಾಗಿಸುತ್ತಿರುವ ಹೃದಯವಿದ್ರಾವಕ ದೃಶ್ಯಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ.

ಶಿಯಾ ಮುಸ್ಲಿಮರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆದಿದೆ ಎನ್ನಲಾಗಿದ್ದು, ಸ್ಫೋಟದ ಹೊಣೆಯನ್ನು ಯಾವುದೇ ಭಯೋತ್ಪಾದಕ ಗುಂಪು ಹೊತ್ತುಕೊಂಡಿಲ್ಲ. ಐಸಿಸ್ ಉಗ್ರರ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ತಾಲಿಬಾನ್ ವಿಶೇಷ ಪಡೆಗಳು ತನಿಖೆ ಆರಂಭಿಸಿವೆ.

ಅಮೆರಿಕ ತನ್ನ ಸೈನ್ಯವನ್ನು ವಾಪಸ್ ಕರೆಸಿಕೊಂಡು, ತಾಲಿಬಾನ್ ಅಧಿಕಾರ ಹಿಡಿದ ಮೇಲೆ ಅಫ್ಘಾನಿನಲ್ಲಿ ನಡೆದಿರುವ ದಾಳಿಗಳ ಪೈಕಿ ಇದು ಅತ್ಯಧಿಕ ಮಂದಿ ಸಾವನ್ನಪ್ಪಿರುವ ಘಟನೆಯಾಗಿದೆ.

Related Articles

Leave a Reply

Your email address will not be published.

Back to top button