Breaking NewsLatestಸಿನಿಮಾ
ಪುನೀತ್ಗೆ ನಂದಮೂರಿ ಬಾಲಕೃಷ್ಣ, ಪ್ರಭುದೇವ್ ಅಂತಿಮ ನಮನ
ಬೆಂಗಳೂರು: ಅಗಲಿದ ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರಕ್ಕೆ ತೆಲುಗು ನಟ ನಂದಮೂರು ಬಾಲಕೃಷ್ಣ ಮತ್ತು ಪ್ರಭುದೇವ್ ಅಂತಿಮ ನಮನ ಸಲ್ಲಿಸಿದರು.
ನಂದಮೂರಿ ಬಾಲಕೃಷ್ಣ, ಪಿನೀತ್ ಪಾರ್ಥಿವ ಶರೀರವನ್ನು ನೋಡುತ್ತಲೇ ಭಾವುಕರಾದರು. ಪುನೀತ್ಗೆ ಅಂತಿಮ ನಮನ ಸಲ್ಲಿಸಿದ ಅವರು, ಕುಟುಂಬದವರನ್ನು ಕಂಡು ಮಾತನಾಡಿಸಿ, ಸಾಂತ್ವನ ಹೇಳಿದರು.
ನಟ ಪ್ರಭುದೇವ್ ಕೂಡ ಪುನೀತ್ ಅಂತಿಮ ದರ್ಶನ ಪಡೆದು, ಸಹೋದರ ಶಿವರಾಜ್ಕುಮಾರ್ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪುನೀತ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ರಾಜ್ ಕುಟುಂಬದೊಂದಿಗಿನ ಬಾಂಧವ್ಯವನ್ನು ಈ ಸಂದರ್ಭದಲ್ಲಿ ನೆನೆದ ಅವರು, ಪುನೀತ್ ನಿಧನದಿಂದ ದೊಡ್ಡ ನಷ್ಟವಾಗಿದೆ ಎಂದರು.