Breaking News

ವ್ಯತಿರಿಕ್ತ ಹವಾಮಾನ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತ

ವಾಷಿಂಗ್ಟನ್: ವ್ಯತಿರಿಕ್ತವಾದ ಹವಾಮಾನದ ಬದಲಾವಣೆಯು ತೀವ್ರವಾಗಿ ಬಾಧಿಸಬಹುದಾದ ವಿಶ್ವದ 11 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿರುವ ಆತಂಕಕಾರಿ ವಿಚಾರ ಅಮೆರಿಕದ ಗುಪ್ತಚರ ಮೌಲ್ಯಮಾಪನ ವರದಿಯಿಂದ ತಿಳಿದಿದೆ.

ಕೆಲ ದಿನಗಳ ಹಿಂದೆ ಕೇರಳ ಹಾಗೂ ಉತ್ತರಾಖಂಡದಲ್ಲಿ ಮೇಘ ಸ್ಫೋಟದಿಂದ ಭಾರೀ ಪ್ರವಾಹ ಸಂಭವಿಸಿರುವ ನಡುವೆಯೇ ಇಂತಹದ್ದೊಂದು ವರದಿ ಬೆಚ್ಚಿಬೀಳಿಸಿದೆ.

ಪ್ರಾಕೃತಿಕ ಹಾಗೂ ಸಾಮಾಜಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಬಹುದಾದ 11 ದೇಶಗಳು ವಿಕೋಪಗಳಿಂದಾಗಿ ತೀವ್ರ ಸಂಕಷ್ಟ ಎದುರಿಸಲಿವೆ. ಜಾಗತಿಕ ತಾಪಮಾನದಿಂದ ಭೌಗೋಳಿಕ ಹಾಗೂ ರಾಜಕೀಯ ಸಂಘರ್ಷಗಳೂ ಏರ್ಪಡಲಿದೆ. ಮುಂದಿನ 2040ನೇ ಇಸವಿವರೆಗೂ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಕೂಡಾ ಅಪಾಯ ಸಾಧ್ಯತೆಯಿದೆ ಎಂದು ಹವಾಮಾನ ಬದಲಾವಣೆ ಕುರಿತ ಮೊದಲ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಭಾರತ ಹಾಗೂ ನೆರೆಯ ಪಾಕಿಸ್ತಾನ, ಅಫ್ಘಾನಿಸ್ತಾನ ಸಹಿತ 11 ದೇಶಗಳಲ್ಲಿ ಅಧಿಕ ಉಷ್ಣಾಂಶ, ಹವಾಮಾನ ವೈಪರೀತ್ಯದಿಂದ ವಿದ್ಯುತ್ ಆಹಾರ, ನೀರು ಮತ್ತು ಆರೋಗ್ಯ ಭದ್ರತೆ ಮೇಲೆ ಪರಿಣಾಮ ಬೀರಲಿದೆ. ಆಗಾಗ ತೀವ್ರ ಚಂಡಾಮಾರುತಗಳ ಪರಿಣಾಮ, ಪ್ರವಾಹ ಪರಿಸ್ಥಿತಿಯಿಂದ ಜಲಮೂಲಗಳನ್ನು ಮಲಿನಗೊಳಿಸಲಿದ್ದು, ಸೊಳ್ಳೆಗಳು, ಮಾರಕ ವೈರಸ್ ಗಳು ಹೆಚ್ಚಿ ಹೊಸ ಹೊಸ ರೋಗಗಳು ಹರಡಲಿವೆ ಎಂದು ಎಚ್ಚರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button