Breaking NewsLatest

ಬಿಜೆಪಿಗೆ ಹಾನಗಲ್​ನಲ್ಲಿ ಹೀನಾಯ ಸೋಲು; ಕಾಂಗ್ರೆಸ್​​ನ ಶ್ರೀನಿವಾಸ್ ಮಾನೆಗೆ ಮಣೆ ಹಾಕಿದ ಮತದಾರ

ಹಾವೇರಿ: ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಆಡಳಿತಾರೂಢ ಬಿಜೆಪಿ ಮುಗ್ಗರಿಸಿದೆ. ಹಾನಗಲ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದೆ. ಅಧಿಕೃತ ಘೋಷಣೆಯೊಂದೇ ಬಾಕಿದೆ. ಇದರಿಂದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹಿನ್ನಡೆಯಾಗಿದೆ.

19 ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದೆ. ಕಾಂಗ್ರೆಸ್‌ನ ಶ್ರೀನಿವಾಸ ಮಾನೆ 87,113 ಮತಗಳನ್ನು ಪಡೆದಿದ್ದರೆ ಬಿಜೆಪಿಯ ಶಿವರಾಜ್​​ ಸಜ್ಜನ್ 79,515 ಮತ ಪಡೆದಿದ್ದಾರೆ. ಜೆಡಿಎಸ್‌ನ ನಿಯಾಜ್ ಶೇಖ್ 921 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಕಾಂಗ್ರೆಸ್‌ 7798 ಮತಗಳ ಅಂತರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ಪಡೆದರು. ಮಾನೆ ಗೆಲುವಿನತ್ತ ಹೋಗ್ತಿದ್ದಂತೆ 75 ತೆಂಗಿನಕಾಯಿ ಒಡೆದು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿರೋ ಮಾಲತೇಶ ದೇವಸ್ಥಾನದ ಬಳಿ ಕಾಯಿ ಒಡೆದ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಧ್ವಜ ಹಿಡಿದು ಗ್ರಾಮದ ತುಂಬೆಲ್ಲ ಘೋಷಣೆ ಕೂಗುತ್ತಾ ಸಂಚರಿಸುತ್ತಿದ್ದಾರೆ.

ಹಾನಗಲ್‌ನಲ್ಲಿ ಜನಬಲ ಗೆದ್ದಿದೆ: ಶ್ರೀನಿವಾಸ ಮಾನೆ

ಹಾನಗಲ್‌ನಲ್ಲಿ ಜನಬಲ ಗೆದ್ದಿದೆ. ಹಣ ಬಲ ಸೋತಿದೆ. ಮತ ಹಾಕಿದ ಜನರಿಗೆ ಸಾಷ್ಟಾಂಗ ನಮಸ್ಕಾರ ಮಾಡುವೆ. ನಮ್ಮ ನಾಯಕರ ಪರಿಶ್ರಮ ಹಾಕಿದ್ದಾರೆ. ಸರ್ಕಾರದ ತಂತ್ರ ಮಣಿಸಿದ್ದಾರೆ. ಜನರು ಸರ್ಕಾರದ ದುರಾಡಳಿತವನ್ನು ತಿರಸ್ಕಾರ ಮಾಡಿದ್ದಾರೆ. ಆಡಳಿಯ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಇನ್ನಾದರೂ ಜನರ ಕಲ್ಯಾಣ ಮಾಡಲಿ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published.

Back to top button